Breaking News

ಸಿದ್ದು ಡ್ರಗ್‌ ಮಾಫಿಯಾ ಗುರು: ಡ್ರಗ್ಸ್‌, ಗಾಂಜಾ ಶಾಲಾ, ಕಾಲೇಜುಗಳಲ್ಲಿ ಯಾವುದೇ ಭಯವಿಲ್ಲದೇ ಸಿಗುತ್ತಿತ್ತು: ಕಟೀಲ್‌

Spread the love

ಜೇಂದ್ರಗಡ: ಡಿನೋಟಿಫಿಕೇಷನ್‌ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೂ ಮುನ್ನವೇ ಜೈಲು ಸೇರಲಿದ್ದಾರೆ. ಆಗ ಕಾಂಗ್ರೆಸ್‌ ಎರಡು ಹೋಳಾಗುತ್ತದೆ. ಒಂದು ಸಿದ್ದರಾಮಯ್ಯ ಪಾರ್ಟಿ, ಮತ್ತೊಂದು ಡಿ.ಕೆ.ಶಿವಕುಮಾರ್‌ ಪಾರ್ಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್‌ ಕಟೀಲ್‌ ಭವಿಷ್ಯ ನುಡಿದರು.

 

ಪಟ್ಟಣದ ಶಾಸಕರ ನಿವಾಸದ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಶನ್‌ ಮಾಡಿ ಪ್ರಭಾವಿ ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ವಿಧಾನಸಭೆ ಚುನಾವಣೆಗೂ ಜೈಲು ಸೇರಲಿದ್ದಾರೆ ಎಂದರು.

ಸಿದ್ದರಾಮಯ್ಯ ಒಂದು ದಿಕ್ಕಿಗೆ, ಡಿಕೆಶಿ ಇನ್ನೊಂದು ದಿಕ್ಕಿಗೆ ಹೋಗುತ್ತಾರೆ. ಆಗ ಕಾಂಗ್ರೆಸ್‌ ಸ್ಥಿತಿ ಬೀದಿಗೆ ಬರುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ದೇಶಕ್ಕೆ ಭ್ರಷ್ಟಾಚಾರ, ಪರಿವಾರ ವಾದ ಮತ್ತು ಭಯೋತ್ಪಾದನೆಗೆ ಪ್ರೇರಣೆ ಎಂಬ ಮೂರು ಕೊಡುಗೆಗಳನ್ನು ಕೊಟ್ಟಿದೆ. ನನ್ನಪ್ಪನಾಣೆಗೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗುವುದಿಲ್ಲ. 2023ರ ವಿಧಾನಸಭೆ ಚುನಾವಣೆ ಎದುರಿಸಲು ಈಗಾಗಲೇ ಬಿಜೆಪಿ ಎರಡು ತಂಡಗಳನ್ನು ಮಾಡಿದೆ. ಕೃಷ್ಣನಂತೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಅರ್ಜುನನಂತೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ರಣಕಹಳೆ ಮೊಳಗಿದೆ ಎಂದರು.

ಸಿದ್ದು ಡ್ರಗ್‌ ಮಾಫಿಯಾ ಗುರು:
ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಮರಳು ಮಾಫಿಯಾ, ಡ್ರಗ್‌ ಮಾಫಿಯಾ ಮಿತಿ ಮೀರಿತ್ತು. ಡ್ರಗ್ಸ್‌, ಗಾಂಜಾ ಶಾಲಾ, ಕಾಲೇಜುಗಳಲ್ಲಿ ಯಾವುದೇ ಭಯವಿಲ್ಲದೇ ಸಿಗುತ್ತಿತ್ತು. ಸಿದ್ದರಾಮಯ್ಯ ಡ್ರಗ್‌ ಮಾಫಿಯಾ ಗುರುವಾಗಿದ್ದಾರೆ. ಬಿಜೆಪಿ ಬಂದ ಮೇಲೆ ಡ್ರಗ್ಸ್‌ನಲ್ಲಿ ಭಾಗಿಯಾದವರನ್ನು ಬಂ ಧಿಸಿ, ಕಡಿವಾಣ ಹಾಕಲಾಗಿದೆ ಎಂದು ಕಟೀಲ್‌ ಆರೋಪಿಸಿದರು.

ಮಹಾತ್ಮ ಗಾಂಧಿ-ರಾಹುಲ್‌
ಗಾಂಧಿಗೆ ಏನು ಸಂಬಂಧ?
ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಹೆಸರಿನಲ್ಲಿ, ಗಾಂಧಿ ಹೆಸರಿನಲ್ಲಿ 70 ವರ್ಷ ಕಾಂಗ್ರೆಸ್‌ ಅಧಿಕಾರ ನಡೆಸಿತು. ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್‌ ಇಂದು ಉಳಿದಿಲ್ಲ. ಇಂದು ಇರುವುದು ನಕಲಿ ಕಾಂಗ್ರೆಸ್ಸಿಗರು. ಮಹಾತ್ಮ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಏನು ಸಂಬಂಧ? ಗರೀಬಿ ಹಠಾವೋ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್‌ನಿಂದ ದೇಶದ ಬಡತನ ನಿವಾರಣೆಯಾಗಲಿಲ್ಲ. ಕೇವಲ ಗಾಂಧಿ  ಕುಟುಂಬ, ಖರ್ಗೆ, ಸಿದ್ರಾಮಣ್ಣ, ಡಿಕೆಶಿ ಕುಟುಂಬಗಳ ಗರೀಬಿ ಹಠಾವೋ ಆಯಿತು ಅಷ್ಟೇ ಎಂದು ಕಟೀಲ್‌ ಹೇಳಿದರು.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ