ಮಹಾರಾಷ್ಟ್ರದಲ್ಲಿ ಒಡೆದು ಎರಡು ಹೋಳಾಗಿರುವ ಶಿವಸೇನೆ ಪಕ್ಷದಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಗುಂಪಿಗೆ ಜ್ಯೋತಿಯ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿರುವ ಹಿನ್ನೆಲೆ ಬೆಳಗಾವಿಯಲ್ಲಿ ಶಿವಸೇನೆ ಜಿಲ್ಲಾ ಘಟಕದ ವತಿಯಿಂದ ವಿಜಯೋತ್ಸವ ಅಚರಿಸಲಾಯಿತು.
ರಾಮಲಿಂಗಖಿಂಡ ಗಲ್ಲಿಯಲ್ಲಿರುವ ಶಿವಸೇನೆ ಕಚೇರಿ ಮುಂದೆ ಛತ್ರಪತಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಪೂಜೆ, ಮಾಲಾರ್ಪಣೆ ಮಾಡಿದರು. ಬಳಿಕ ಉದ್ಧವ್ ಠಾಕ್ರೆ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಶಿವಸೇನೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಮಾತನಾಡಿದ ಅರವಿಂದ ನಾಗನೂರಿ ನಮ್ಮ ಶಿವಸೇನಾ ಪಕ್ಷಕ್ಕೆ ಜ್ಯೋತಿಯ ಚಿಹ್ನೆ ಸಿಕ್ಕಿದೆ. ಗಡಿ ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತೇವೆ. ಈ ಮೂಲಕ ಉದ್ಧವ್ ಠಾಕ್ರೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಶಿರೋಳ್ಕರ್, ರಾಜಕುಮಾರ್ ಬೋಕಡೆ, ದಿಲೀಪ್ ಬೈಲೂರಕರ್, ಮಹೇಶ ಟಂಗಸಾಲೆ ಸೇರಿ ಇನ್ನಿತರರು ಭಾಗಿಯಾಗಿದ್ದರು.
Laxmi News 24×7