Breaking News

‘ಜನಜಾಗೃತಿ ಕಾರ್ಯಕ್ಕೆ ಜನರು ಸಹಕರಿಸಬೇಕು’

Spread the love

ಹುಕ್ಕೇರಿ: ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ತಾನು ಸಾಯುವುದರ ಜತೆ ತನ್ನ ಕುಟುಂಬವನ್ನೆ ನಾಶ ಮಾಡುವನು. ಜನರು ದುಶ್ಚಟದಿಂದ ದೂರ ಉಳಿದು ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದ ಜನ ಜಾಗೃತಿ ವೇದಿಕೆ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

 

ಅವರು ಪಟ್ಟಣದ ಡಾ.ಜಗಜೀವನರಾಮ ಸಭಾ ಭವನದಲ್ಲಿ ಆಯೋಜಿಸಿದ್ದ ‘ಗಾಂಧಿಸ್ಮ್ರತಿ ಅಂಗವಾಗಿ ‘ದುಶ್ಚಟಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ಉಪ ತಹಶೀಲ್ದಾರ್ ನಾಗೇಂದ್ರ ಪಾಟೀಲ, ಸಂಪನ್ಮೂಲ ವ್ಯಕ್ತಿ ಪಿ.ಜಿ.ಕೊಣ್ಣೂರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಮದಿಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ ಅತಿಥಿಗಳಾಗಿದ್ದರು.

ಹಳೆಗುಡಗನಟ್ಟಿಯ ಮಲ್ಲಿಕಾರ್ಜುನ ಮತ್ತು ಮದಿಹಳ್ಳಿಯ ಭೀಮಪ್ಪ ತಾವು ಕುಡಿತಕ್ಕೆ ಅಂಟಿಕೊಂಡಾಗ ಆದ ಘಟನೆ ಮತ್ತು ಕುಡಿತ ಬಿಟ್ಟ ನಂತರದ ಬದಲಾವಣೆಯ ಅನಿಸಿಕೆ ವ್ಯಕ್ತಪಡಿಸಿದರು.

ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಟಿ.ಮುನ್ನೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧಿ ವೇಷಧಾರಿಯಾಗಿದ್ದ ರವಿ ನಾವಿ ಜಾಥಾದ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದ. ಇದಕ್ಕೂ ಮೊದಲು ಪಟ್ಟಣದ ಅಡವಿ ಸಿದ್ಧೇಶ್ವರ ಮಠದಿಂದ ಜನಜಾಗೃತಿ ಜಾಥಾ ಪ್ರಮುಖ ಬೀದಿಗಳ ಮೂಲಕ ನಡೆಯಿತು. ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಧಾರವಾಡ ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ವೈ.ನಾಗೇಶ್ ಚಾಲನೆ ನೀಡಿದರು.

ವಲಯ ಮೇಲ್ವಿಚಾರಕ ಸತೀಶ್ ಸ್ವಾಗತಿಸಿದರು. ವಿಭಾಗೀಯ ಯೋಜನಾಧಿಕಾರಿ ನಾಗೇಶ್ ಪ್ರಾಸ್ತಾವಿಸಿದರು


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ