Breaking News

‘ಏರ್ಟೆಲ್’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್; ಗುರುವಾರದಿಂದಲೇ 5G ಸೇವೆಗೆ ಚಾಲನೆ

Spread the love

ತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಿದ್ದು, ಇದರಿಂದ ಗ್ರಾಹಕರಿಗೆ ಅತಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿ ಅವರ ಟೆಲಿಕಾಂ ಕಂಪನಿ 5 ಜಿ ತರಂಗಾಂತರಗಳನ್ನು ತಮ್ಮದಾಗಿಸಿಕೊಂಡಿವೆ.

 

ಇದರ ಮಧ್ಯೆ ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಗುರುವಾರದಿಂದಲೇ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದ್ದು, ಪ್ರಸ್ತುತ ಇರುವ 4ಜಿ ಯೋಜನೆಗಳ ದರದಲ್ಲೇ 5ಜಿ ಸೇವೆಯನ್ನು ಗ್ರಾಹಕರು ಬಳಸಿಕೊಳ್ಳಬಹುದು.

ಏರ್ಟೆಲ್ ಗ್ರಾಹಕರು 5 ಜಿ ಮೊಬೈಲ್ ಫೋನ್ ಹೊಂದಿದ್ದರೆ ಅಂತವರು ಹಳೆಯ ಸಿಮ್ ಗೆ ತಮ್ಮ ನೆಟ್ವರ್ಕ್ ಸೆಟ್ಟಿಂಗ್ಸ್ ಅನ್ನು ಬದಲಿಸಿಕೊಳ್ಳುವ ಮೂಲಕ 5ಜಿ ಸೇವೆಯನ್ನು ಬಳಸಬಹುದು. ಪ್ರಸ್ತುತ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಣಾಸಿಯಲ್ಲಿ ಏರ್ಟೆಲ್ 5ಜಿ ಸೇವೆಯನ್ನು ನೀಡಲಾಗುತ್ತಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ