ಕಲಬುರಗಿ: ನಗರದ ಸಂತೋಷ್ ಕಾಲೊನಿಯಲ್ಲಿ ವಿಜಯದಶಮಿ ಹಬ್ಬದಂದು ಸಂಜೆ ಬನ್ನಿ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿಯೇ ಅಣ್ಣ ತಮ್ಮಂದಿರು, ಸಹೋದರಿಯ ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸಂತೋಷ್ ಕಾಲೊನಿಯ ಲಕ್ಷ್ಮೀ ಕಾಂತ್ ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ದಸರಾ ಹಬ್ಬದ ಅಂಗವಾಗಿ ಬನ್ನಿ ಬಂಗಾರ ಕೊಡಲು ಮನೆಗೆ ಬಂದ ಹೆಂಡತಿಯ ಸಹೋದರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಶಿವಕಾಂತ್, ಪ್ರಶಾಂತ್ ಎಂಬುವವರು ಈ ಕೊಲೆ ಮಾಡಿದ್ದು, ಕೊಲೆಯಾದ ಲಕ್ಷ್ಮಿಪುತ್ರನ ಹೆಂಡತಿ ಪ್ರೀತಿಯವರ ಸಹೋದರರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಿಪುತ್ರ ಮತ್ತು ಪ್ರೀತಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಲಕ್ಷ್ಮಿಪುತ್ರ ಈಗಾಗಲೇ ಮದುವೆಯಾಗಿದ್ದ, ಇದು ಆತನ ಎರಡನೇ ಮದುವೆಯಾಗಿತ್ತು. ಮದುವೆಯ ಬಳಿಕ ಲಕ್ಷ್ಮಿಕಾಂತದ ತನ್ನ ಪತ್ನಿ ಪ್ರೀತಿಯ ಸಹೋದರರಿಗೆ ಎಂಟು ಲಕ್ಷ ಹಣ ನೀಡಿದ್ದ. ಹಣ ವಾಪಸ್ ಕೊಡುವಂತೆ ಲಕ್ಷ್ಮಿಕಾಂತ್ ಆಗ್ಗಾಗ ಕೇಳುತ್ತಿದ್ದ. ಈ ಕುರಿತು ಅ.2ರಂದು ಹಣ ಕೊಡುವ ಬಗ್ಗೆ ಮಾತುಕತೆಯಾಗಿತ್ತು.
Laxmi News 24×7