Breaking News

ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.

Spread the love

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ನವರಾತ್ರಿ ಮಹೋತ್ಸವ ಅಂಗವಾಗಿ ಸಮೀಪದ ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು. ಹಲವಾರು ಮಹಿಳೆಯರು ಉಡಿ ತುಂಬುವ ಸಂಪ್ರದಾಯದಲ್ಲಿ ಪಾಲ್ಗೊಂಡರು.

 

ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸಕಲ ವ್ಯವಸ್ಥೆ ಕಲ್ಪಿಸಿದರು.

ಪರಮೇಶ್ವರಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಹಿಳೆಯರು ಆರತಿ ತಟ್ಟೆ ಹಿಡಿದು, ಕುಂಕುಮ, ಅರಿಸಿನ, ಬಳೆ, ಕುಪ್ಪಸ, ಸೀರೆ, ವಿಧವಿಧವಾದ ಹೂಮಾಲೆ, ಕಾಯಿ, ಕರ್ಪೂರ ತಂದು ಪೂಜೆ ನೆರವೇರಿಸಿದರು. ಎಣ್ಣೆ ಹಾಕಿ ದೀಪ ಹಚ್ಚಿದರು. ಮಾತಾಮಾತಾ ದುರ್ಗಾ ಮಾತಾ, ಜೈ ಅಂಬಾ ಭವಾನಿ, ಜೈ ತುಳಜಾ ಭವಾನಿ, ಜೈ ದುರ್ಗಾ ಪರಮೇಶ್ವರಿ, ಜೈ ಅಂಬಾ ಪರಮೇಶ್ವರಿ… ಎಂದು ಘೋಷಣೆ ಹಾಕಿದರು.

ಸಾಧುಗಳು, ಸಂತರು, ಮಹಾತ್ಮರ ಹಾಗೂ ದೇವತೆಗಳ ಮೂರ್ತಿಗಳನ್ನೂ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬನ್ನಿ‌ಮಹಾಕಾಳಿ ವೃಕ್ಷಕ್ಕೆ ಪೂಜೆ ಮುಗಿಸಿ ವನಿತೆಯರು ದೇವಿಗೆ ಉಡಿ ತುಂಬಿದರು. ಆರ್.ವಿ.ಜಕ್ಕಪ್ಪನವರ ಕುಂಟುಬಸ್ಥರು ಉಪಾಹಾರ ಸೇವೆ ಮಾಡಿದರು.

ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಚೇರಮನ್ ಡಿ.ಬಿ.ಮಲ್ಲೂರ, ಹಿರಿಯರಾದ ಬಸನಾಯ್ಕ ಮಲ್ಲೂರ, ಶಿವಾನಂದ ಕೊಳ್ಳಿ, ರಾಜು ಬಡ್ಲಿ, ಶಿವಾನಂದ ಬೈಲವಾಡ, ರಾಜು ಮಾರಿಹಾಳ, ಶಿವಾನಂದ ಗಾಣಗಿ, ಎನ್.ಸಿ.ಗೋಣಿ, ಮಹಾಂತೇಶ ಮಳಗಲಿ, ರಾಜು ಬುಡ್ಡನ್ಮವರ, ಎಸ್.ಎನ್.ಕೊಳ್ಳಿ, ಪ್ರಸಾದ ಸೇವೆ, ಅರ್ಚಕರಾದ ಪ್ರಭು ಹಿರೇಮಠ, ಬಂಕನಾಥ ಕೊರಿಕೊಪ್ಪ, ರಾಜ್ಯ ಹೊರ ರಾಜ್ಯ, ಇಂಚಲ, ಬೈಲಹೊಂಗಲ, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ