Breaking News

ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

Spread the love

ಸರ್ಕಾರಿ ಉದ್ಯೋಗವೇ ಹಾಗೆ, ಒಮ್ಮೆ ಜಾಬ್ ಆದ್ರೆ ಸಾಕು ಆಮೇಲೆ ಲೈಫ್ ಫುಲ್ ಸೆಟಲ್ ಅನ್ನೋದು ಹೆಚ್ಚಿನವರ ಅಭಿಪ್ರಾಯ. ‌ಅದರಲ್ಲೂ ವೇತನ‌ ಹೆಚ್ಚಾಯಿತು ಅಂದ್ರೆ ಅದರಲ್ಲಿ ಸಿಗೋ ಸಂತೋಷ ಮತ್ಯಾವುದರಿಂದಲೂ‌ ಸಿಗಲ್ಲ‌‌ ಎಂಬ‌ ಅನುಭವ ಆಗುತ್ತದೆ.

ಇದೀಗ ಇದೇ ಸರ್ಕಾರಿ ನೌಕರರಿಗೆ ಹೊಸ ವರ್ಷಾರಂಭದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಮೂಲಕ ಚುನಾವಣೆ ವರ್ಷದಲ್ಲಿ ನೌಕರ ವರ್ಗಕ್ಕೆ ಭರ್ಜರಿ ಗಿಫ್ಟ್ ದೊರಕಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ವರದಿಯಂತೆ ಸದ್ಯ ವೇತನ‌ ನೀಡಲಾಗುತ್ತಿದೆ. ಆದ್ರೆ ಏಳನೇ ವೇತನ‌ ಆಯೋಗ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಿ ನೌಕಕರರ ಸಂಘ ಒತ್ತಾಯಿಸಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ‌ ಮತ್ತು ಭತ್ಯೆ ನೀಡುವಂತೆ ಮನವಿಯನ್ನು ಸಹ‌ ಮಾಡಿಕೊಂಡಿತ್ತು. ಬಿ.ಎಸ್.ಯಡಿಯೂರಪ್ಪ ಸಿ.ಎಂ ಆಗಿದ್ದ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿದ್ದರು. ಆದ್ರೆ ಇದು ಕೇವಲ‌ ಭರವಸೆವಾಗಿಯೆ ಉಳಿದಿದ್ದರಿಂದ ನೌಕರರ ಸಂಘ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ವೇತನ‌ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಪೂರಕ ಸ್ಪಂದನೆ ವ್ತಕ್ತವಾದಂತೆ ಕಾಣುತ್ತಿದೆ.

2022-23ನೇ ಸಾಲಿನ ಬಜೆಟ್ ಮೇಲಿನ ಉತ್ತರ ನೀಡುವ ವೇಳೆ ಈ ವಿಚಾರಕ್ಕೆ ಸಂಬಂಧಿಸಿ ಸಿ.ಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ರಾಜ್ಯ ಸರ್ಕಾರ ನೌಕರರ ವೇತನ ಹೆಚ್ಚಳಗೊಳಿಸುವಲ್ಲಿ ಬದ್ದವಾಗಿರಲಿದೆ ಎಂದು ಹೇಳಿದ್ದರು. ಇದಕ್ಕಾಗಿ ಅಧಿಕಾರಿಗಳ ಸಮಿತಿ ರಚಿಸಿ ವೇತನ ಹೆಚ್ಚಳ ಮಾಡಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಇದೀಗ ಸಿ.ಎಂ‌‌ ಬೊಮ್ಮಾಯಿ ಅವರ ಮಾತಿನಂತೆ ವೇತನ ಪರಿಷ್ಕರಣೆ ಸಂಬಂಧ ಸಮತಿ‌ ರಚನೆ ಮಾಡೋದಕ್ಕೆ ತಯಾರಿಯನ್ನು ನಡೆಸಲಾಗುತ್ತಿದೆ. ಈ ಮೂಲಕ‌ ಚುನಾವಣೆ ವರ್ಷದಲ್ಲಿಯೇ ಭರ್ಜರಿ ಗಿಫ್ಟ್ ನ್ನು ಸರ್ಕಾರ ಸರ್ಕಾರಿ ನೌಕರರಿಗೆ ನೀಡಲಿದೆ. ಈ ಸಮಿತಿ ವರದಿ ನೀಡುವುದಕ್ಕೆ ಮೂರು ತಿಂಗಳ ಗಡುವು ನೀಡಲಾಗಿದೆ ಎಂಬ ಮಾಹಿತಿಯು ಇದೆ. ಜನವರಿ ಪ್ರಾರಂಭದಲ್ಲಿ ಈ ಸಮಿತಿಯಿಂದ ವರದಿ‌ ನಿರೀಕ್ಷಿಸಬಹುದಾಗಿದ್ದು ಆ ಬಳಿಕ ಪರಿಷ್ಕೃತ ವೇತನ ನೀತಿಯಂತೆ ವಿವಿಧ ಸೌಲಭ್ಯ ದೊರೆಯಲಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ