Breaking News

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

Spread the love

ಕೇರಳ: ಪತ್ರಕರ್ತೆಯೊಬ್ಬರಿಗೆ ನಟನೊಬ್ಬ ಅಸಭ್ಯವಾಗಿ ನಿಂದಿಸಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಮಲಯಾಳಂ ಸಿನಿಮಾರಂಗದಲ್ಲಿ ಮತ್ತೊಂದು ಘಟನೆ ನಡೆದಿದೆ.

ಸಿನಿತಾರೆಯರು ತಮ್ಮ ಚಿತ್ರದ ಪ್ರಮೋಷನ್‌ ಗಾಗಿ ಮಾಲ್‌, ಥಿಯೇಟರ್‌ ಗೆ ಹೋಗುವಾಗ, ಅಭಿಮಾನಿಗಳು, ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.‌ ಮಂಗಳವಾರ ಕೇರಳದ ಕೋಜಿಕೋಡ್‌ ಮಾಲ್ ವೊಂದರಲ್ಲಿ “ಸ್ಯಾಟರ್‌ ಡೇ ನೈಟ್”‌ ಎನ್ನುವ ಸಿನಿಮಾ ಪ್ರಚಾರದಲ್ಲಿ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು.

 

ಮೆಚ್ಚಿನ ಕಲಾವಿದರನ್ನು ನೋಡಲು ಅಭಿಮಾನಿಗಳು, ಪ್ರೇಕ್ಷಕರು ಮುಗಿಬಿದ್ದಿದ್ದು, ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಗದ್ದಲದ ನಡುವೆ ನಟಿಯರಿಬ್ಬರಿಗೆ ಯಾರೋ ಅಪರಿಚಿತರು ಮೈ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಕೆಟ್ಟ ಅನುಭವದ ಬಗ್ಗೆ ನಟಿಯರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಟಿ, ” ಸಿನಿಮಾದ ಪ್ರಚಾರ ಮುಗಿದ ಬಳಿಕ ನಾವು ಹೊರಡುತ್ತಿದ್ದೆವು. ಜನಸಂದಣಿ ನಡುವೆ ಯಾರೋ ನನ್ನ ಸಹ ನಟಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅದು ಯಾರೆಂದು ಆ ಕ್ಷಣದಲ್ಲಿ ಅರಿಯಲು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ತುಂಬಾ ಜನರಿದ್ದರು” ಎಂದಿದ್ದಾರೆ.

ಮತ್ತೊಬ್ಬ ನಟಿಯೂ ಈ ಬಗ್ಗೆ ಹೇಳಿದ್ದು, ನನ್ನ ಸಹ ನಟಿಯ ಬಳಿಕ, ನನ್ನ ಜತೆಗೂ ಈ ರೀತಿಯ ಅಸಭ್ಯ ವರ್ತನೆ ನಡೆಯಿತು. ನಾನು ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದೆ. ಆತನಿಗೆ ಹೊಡೆಯಲು ಹೋದದ್ದನ್ನು. ನೀವು ವಿಡಿಯೋದಲ್ಲಿ ಜನ ಸಂದಣಿಯನ್ನು ನೋಡಬಹುದು. ಯಾರಿಗೂ ಕೂಡ ಈ ರೀತಿಯ ಅನುಭವವಾಗಬಾರದು. ಈ ರೀತಿಯ ಮಹಿಳೆಯರ ಮೇಲಿನ ಕಿರುಕುಳ ಸಹಿಸ ತಕ್ಕದ್ದಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ