ದೇಶದಲ್ಲಿ ಪಿಎಫ್‍ಐ ಬೆಳೆಯಲು ಕುಮ್ಮಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ. ಪಿಎಫ್‍ಐ ಮೇಲೆ ಹಾಕಿದ್ದ ಕೇಸ್ ವಾಪಸ್ ಪಡೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಬೆಳಗಾವಿಯ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪಿಎಫ್‍ಐ ಮೇಲೆ ಹಾಕಿದ್ದ ಕೇಸ್ ಸಿದ್ದರಾಮಯ್ಯ ವಾಪಸ್ ಪಡೆದಿದ್ದರಿಂದ ಪಿಎಫ್‍ಐಗೆ ಬಲ ಬಂದಿತು. ದೇಶ ವಿರೋಧ ಕೆಲಸ ಮಾಡಿದ್ರು ಕಾಂಗ್ರೆಸ್ ಸರ್ಕಾರ ನಮ್ಮ ಬೆನ್ನಿಗಿದೆ ಎಂದು ತಿಳಿದುಕೊಂಡಿದ್ದರು. ಆದ್ರೆ ಇವತ್ತು ಸಿಕ್ಕ ದಾಖಲೆಗಳ ಆಧಾರ ನೋಡಿದ್ರೆ ಗೊತ್ತಾಗುತ್ತೆ. ಇನ್ನೊಂದೆರಡು ವರ್ಷ ಬಿಟ್ಟಿದ್ರೆ ಇಡೀ ದೇಶವನ್ನೆ ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಇವರು ಬೆಳೆಸಿಕೊಂಡಿದ್ದರು ಎಂದು ಕಿಡಿಕಾರಿದರು.
ಪಿಎಫ್‍ಐ ದೇಶ, ಸಮಾಜ ವಿರೋಧಿ ಹಾಗೂ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ. ಹೀಗಾಗಿ ಈ ಹಿಂದೆ ಪದಾಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾಗ. ಸುಮಾರು 2000ಕ್ಕಿಂತ ಹೆಚ್ಚು ಕೇಸ್‍ಗಳನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಾಪಾಸ್ ಮಾಡಿದರು.
ಇವತ್ತೆನಾದ್ರು ಕರ್ನಾಟಕದಲ್ಲಿ ಪಿಎಫ್‍ಐ ಇಷ್ಟು ಬೆಳೆಯಲು ಕಾರಣ ಕಾಂಗ್ರೆಸ್‍ನವರು ಹಾಗೂ ಸಿದ್ದರಾಮಯ್ಯ ಕಾರಣ. ಈಗ ಉತ್ತಮ ಕಾರ್ಯಾಚರಣೆ ಮಾಡಿ ಪಿಎಫ್‍ಐ ಅನ್ನು ಮಟ್ಟ ಹಾಕುವ ಕೆಲಸ ಮಾಡಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ನಾನು ಧನ್ಯವಾದ ಹೇಳುತ್ತೇನೆ. ಇದರಿಂದ ನಿಶ್ಚಿತವಾಗಿ ದೇಶಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಅಭಯ್ ಪಾಟೀಲ್ ಹೇಳಿದರು.