Breaking News

ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

Spread the love

ಕೊಚ್ಚಿ: ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಎಲ್ಲಾ ವೈದ್ಯರು ಬರವಣಿಗೆ ಅಸ್ಪಷ್ಟವಾಗಿರುತ್ತದೆ ಎಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ.

ಏಕೆಂದರೆ, ಇಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇರಳದ ಮಕ್ಕಳ ತಜ್ಞರೊಬ್ಬರು ಬರೆದಿರುವ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಡಾ. ನಿತಿನ್ ನಾರಾಯಣನ್ ಅವರು ತಮ್ಮ ಔಷಧ ಚೀಟಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗುತ್ತಿದ್ದಾರೆ. ಇರಿಂಜಲಕುಡ ಬಳಿಯ ತ್ರಿಶೂರ್‌ನ ಪಡಿಯೂರಿನವರಾದ ಇವರು ಕಳೆದ ಮೂರು ವರ್ಷಗಳಿಂದ ಸಿಎಚ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರು ಔಷಧ ಚೀಟಿಗಳನ್ನು ಬ್ಲಾಕ್ ಲೆಟರ್‌ಗಳಲ್ಲಿ ಬರೆಯಬೇಕು ಎಂದು ವಿವಿಧ ಏಜೆನ್ಸಿಗಳು ಕಡ್ಡಾಯಗೊಳಿಸಿದ್ದರೂ, ಇನ್ನೂ ಅನೇಕರು ಅದನ್ನು ಪಾಲಿಸದೇ ಅಸ್ಪಷ್ಟ ಬರಹವನ್ನೇ ಮುಂದುವರಿಸಿದ್ದಾರೆ. ಆದರೆ, ನಿತಿನ್ ನಾರಾಯಣನ್ ಅವರು ಇದಕ್ಕೆ ತದ್ವಿರುದ್ಧವಾಗಿದ್ದು, ಔಷಧ ಚೀಟಿಯಲ್ಲಿ ತುಂಬಾ ಸ್ಪಷ್ಟವಾಗಿ ಕಾಣುವಂತೆ ಬ್ಲಾಕ್​ ಲೆಟರ್​ಗಳಲ್ಲಿಯೇ ಬರೆಯುತ್ತಿದ್ದಾರೆ.

ಬಾಲ್ಯದಿಂದಲೂ ನಿತಿನ್​ ಅವರು ಉತ್ತಮ ಕೈಬರಹದ ಕೌಶಲ್ಯವನ್ನು ಹೊಂದಿದ್ದಾರೆ. ಕಾಪಿಬುಕ್ ಅಭ್ಯಾಸಗಳು ನನಗೆ ಸಹಾಯ ಮಾಡಿತು ಮತ್ತು ಅಧ್ಯಯನಗಳು ಮುಗಿದ ನಂತರವೂ ನಾನು ಬರವಣಿಗೆಯ ಶೈಲಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ಡಾ. ನಿತಿನ್ ಅವರು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದರು ಮತ್ತು ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆಯಂಡ್​ ರಿಸರ್ಚ್ (ಜಿಐಪಿಎಂಇಆರ್​) ನಿಂದ ಎಂಡಿ ಪಡೆದಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ