Breaking News

ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ

Spread the love

ಬೆಂಗಳೂರು : ಓರ್‌ಮ್ಯಾಕ್ಸ್‌ ಸಂಸ್ಥೆ ಭಾರತದ ಟಾಪ್‌ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಮೊದಲ ಸ್ಥಾನದಲ್ಲಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಸ್ಟಾರ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದು, ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ.

 

ಹೌದು, ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಸೌಂಡ್‌ ಮಾಡುವ ಮೂಲಕ ಕೆಜಿಎಫ್‌ ಭಾರತದಾದ್ಯಂತ ಕನ್ನಡದ ಪತಾಕೆ ಹಾರಿಸಿತ್ತು. ಅದರಂತೆ ಯಶ್‌ ಸಹ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಿದ್ದಾರೆ. ಸದ್ಯ ಓರ್‌ಮ್ಯಾಕ್ಸ್‌ ನಡೆಸಿದ ಹಲವು ಸಮೀಕ್ಷೆಗಳ ಪೈಕಿ ಭಾರತದ ಟಾಪ್‌ ಹೀರೋಗಳ ಪಟ್ಟಿಯೂ ಒಂದು. ಇದರಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಸಿನಿರಂಗಗಳ ನಟರ ಸ್ಕೋರ್‌ಗಳು ಇವೆ.

Image

ಪಟ್ಟಿಯನ್ನು ನೋಡುವುದಾದರೆ, ಮೊದಲನೇ ಸ್ಥಾನದಲ್ಲಿ ದಳಪತಿ ವಿಜಯ್ ಅವರಿದ್ದಾರೆ, ಎರಡನೇ ಸ್ಥಾನದಲ್ಲಿ ಪ್ರಭಾಸ್‌ ಹಾಗೂ ಮೂರನೇ ಸ್ಥಾನದಲ್ಲಿ ಜ್ಯೂ. ಎನ್‌ಟಿಆರ್‌, ಇನ್ನು ನಾಲ್ಕನೇ ಪ್ಲೇಸ್‌ನಲ್ಲಿ ಅಲ್ಲು ಅರ್ಜುನ್‌ ಇದ್ದಾರೆ. ಕೆಜಿಎಫ್‌ ಮೂಲಕ ಭಾರತದಾದ್ಯಂತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಯಶ್‌ ಐದನೇ ಸ್ಥಾನದಲ್ಲಿ ಮಿಂಚಿದ್ದಾರೆ. ಇನ್ನು 6ನೇ ಸ್ಥಾನದಲ್ಲಿ ಅಕ್ಷಯ್‌ ಕುಮಾರ್‌, 7ನೇ ಸ್ಥಾನದಲ್ಲಿ ರಾಮ್‌ ಚರಣ್‌, 8ನೇ ಸ್ಥಾನದಲ್ಲಿ ಮಹೇಶ್‌ ಬಾಬು, 9ನೇ ಸ್ಥಾನದಲ್ಲಿ ಸೂರ್ಯ 10ನೇ ಸ್ಥಾನದಲ್ಲಿ ಅಜಿತ್‌ಕುಮಾರ್‌ ಅವರಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ