Breaking News

ನಾನು ‘ಹಾಟ್ ಹಾಟ್’ ಆಗಿ ಕಾಣಿಸಿಕೊಂಡರೆ ಫ್ಯಾನ್ಸ್ ಒಪ್ಪಲ್ಲ:ರಚಿತಾ ರಾಮ್

Spread the love

ರಚಿತಾ ರಾಮ್ ಎರಡ್ಮೂರು ಸಿನಿಮಾಗಳಲ್ಲಿ ಸಖತ್ ಬೋಲ್ಡ್ (Bold) ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅದರಲ್ಲೂ ಉಪೇಂದ್ರ (Upendra) ಜೊತೆಗಿನ ಐ ಲವ್ ಯೂ ಸಿನಿಮಾದ ಹಾಡೊಂದರಲ್ಲಿ ಅವರನ್ನು ಆ ರೀತಿ ಕಂಡು ಸ್ವತಃ ಅಭಿಮಾನಿಗಳೇ ಬೆಚ್ಚಿ ಬಿದ್ದಿದ್ದರು. ಕೊನೆಗೆ ಈ ಹಾಡಿನ ಕುರಿತು ಮಾತನಾಡಿದ್ದ ರಚಿತಾ ರಾಮ್ (Rachita Ram), ‘ನಾನು ಆ ರೀತಿಯಲ್ಲಿ ಕಾಣಿಸಿಕೊಳ್ಳಬಾರದಿತ್ತು. ನನ್ನ ತಂದೆಗೂ ಅದು ಸರಿ ಕಾಣಲಿಲ್ಲ. ಇನ್ಮುಂದೆ ನಾನು ಆ ರೀತಿ ಪಾತ್ರ ಮತ್ತು ದೃಶ್ಯಗಳಲ್ಲಿ ನಟಿಸಲಾರೆ’ ಎಂದು ಹೇಳಿದ್ದರು.

ಅಲ್ಲಿಗೆ ರಚಿತಾ ರಾಮ್ ಬೋಲ್ಡ್ ಪಾತ್ರಗಳಿಂದ ಮುಕ್ತಿ ಪಡೆದರು ಎಂದು ಅಭಿಮಾನಿಗಳು ನಿಟ್ಟುಸಿರುವ ಇಡುವಾಗಲೇ ಅಜಯ್ ರಾವ್ ಜೊತೆ ‘ರಚ್ಚು’ ಸಿನಿಮಾದಲ್ಲಿ ಅಂಥದ್ದೇ ಒಂದಷ್ಟು ದೃಶ್ಯಗಳಲ್ಲಿ ನಟಿಸಿ ಮತ್ತೆ ಅಚ್ಚರಿ ಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ‘ಫಸ್ಟ್ ನೈಟ್ ನಲ್ಲಿ ಮೊದಲು ಏನು ಮಾಡ್ತಿರೋ, ನಾನು ಅದನ್ನೇ ದೃಶ್ಯದಲ್ಲಿ ಮಾಡಿದ್ದು’ ಎಂದು ಹೇಳುವ ಮೂಲಕ ಟ್ರೋಲ್ ಕೂಡ ಆಗಿದ್ದರು. ಆಗಲೂ ಅಂತಹ ದೃಶ್ಯಗಳಲ್ಲಿ ನಟಿಸಲ್ಲ ಎನ್ನುವ ಮಾತೇ ಅವರಿಂದ ಬಂದಿತ್ತು. 

ಇದೀಗ ಧನಂಜಯ್ (Dhananjay) ನಟನೆಯ ಮಾನ್ಸೂನ್ ರಾಗ ಸಿನಿಮಾದಲ್ಲಿ ರಚಿತಾ ಮತ್ತೊಂದು ಬೋಲ್ಡ್ ಆಗಿರುವಂತಹ ಪಾತ್ರವನ್ನು ಮಾಡಿದ್ದಾರೆ. ಆದರೆ, ಈ ಬಾರಿ ಅವರು ಸ್ಕಿನ್ ತೋರಿಸುವಂತಹ ದೃಶ್ಯಗಳಲ್ಲಿ ನಟಿಸಿಲ್ಲವಂತೆ. ಅದು ಪಾತ್ರಕ್ಕೆ ಅವಶ್ಯಕತೆಯೂ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾನು ಹಾಟ್ ಹಾಟ್ ಆಗಿ ಕಾಣಿಸಿಕೊಂಡರೆ, ಸ್ಕ್ರಿನ್ ಶೋ ಆಗುವಂತಹ ಪಾತ್ರ ಮಾಡಿದರೆ, ಅಭಿಮಾನಿಗಳು ಒಪ್ಪುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ