Breaking News

ಗೋಕರ್ಣದ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ- ಭಾರೀ ಅನಾಹುತ ತಪ್ಪಿಸಿದ ಮರ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಕರ್ಣದ ಮಾಣೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿರುವ ಗುಡ್ಡ ಕುಸಿದಿದ್ದು, ಈ ವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಆದರೆ ಪಕ್ಕದಲ್ಲೇ ಬೃಹದಾಕಾರದ ಮರವಿದ್ದ ಕಾರಣ ಗುಡ್ಡದಿಂದ ಜಾರಿದ ಕಲ್ಲುಬಂಡೆ ಮರದ ಬಳಿ ನಿಂತಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇದರಿಂದಾಗಿ ಸ್ಥಳೀಯರು ಪ್ರಾಣಾಪಾಯದಿಂದ ಪಾರಾಗಿದ್ದು, ನಿಟ್ಟುಸಿರು ಬಿಟ್ಟಿದ್ಬಂಡೆ ಬಿದ್ದ ಜಾಗದ ಸುತ್ತ ಹಾಗೂ ಪಕ್ಕದಲ್ಲೇ ಮನೆಗಳಿದ್ದು, ಗುಡ್ಡದ ಬಲಭಾಗಕ್ಕೆ ಕಲ್ಲುಬಂಡೆ ಜಾರಿದಲ್ಲಿ ಮನೆಗಳ ಮೇಲೆ ಬೀಳುತಿತ್ತು. ಹಾಗೆಯೇ ಎಡಭಾಗಕ್ಕೆ ಜಾರಿದ್ದರೆ ದೇವಸ್ಥಾನದ ಮೇಲೆ ಬೀಳುತಿತ್ತು. ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.ದಾರೆ.ಬಂಡೆ ಬಿದ್ದ ಜಾಗದ ಸುತ್ತ ಹಾಗೂ ಪಕ್ಕದಲ್ಲೇ ಮನೆಗಳಿದ್ದು, ಗುಡ್ಡದ ಬಲಭಾಗಕ್ಕೆ ಕಲ್ಲುಬಂಡೆ ಜಾರಿದಲ್ಲಿ ಮನೆಗಳ ಮೇಲೆ ಬೀಳುತಿತ್ತು.

ಹಾಗೆಯೇ ಎಡಭಾಗಕ್ಕೆ ಜಾರಿದ್ದರೆ ದೇವಸ್ಥಾನದ ಮೇಲೆ ಬೀಳುತಿತ್ತು. ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.

 


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ