ರಗ್ಗು ಮಾರುವ ನೆಪದಲ್ಲಿ ಬಂದು ಸರಕಳ್ಳತನಕ್ಕೆ ಯತ್ನಿಸಿದ ನಾಲ್ವರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಖಾನಾಪೂರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುಮಾರಿಗೆ ರಗ್ಗು ಮಾಡಿರುವುದಾಗಿ ಹೇಳಿಕೊಂಡು ನಾಲ್ವರು ಇಟಗಿ ಗ್ರಾಮಕ್ಕೆ ಬಂಧಿದ್ದರು. ಜನರ ಮನೆ, ಮನೆಗೆ ತೆರಳಿ ಉದ್ರಿಯಲ್ಲಿ ನೀಡುವುದಾಗಿ ಹೇಳಿಕೊಂಡು ಓಡಾಡಿದ್ದಾರೆ.
ಈ ವೇಳೆ ಮಹಿಳೆಯೋರ್ವಳ ಕೊರಳಿನ ಸರ ಕದಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೂಗಾಡಿದ್ದಾಳೆ. ಆಗ ಅಕ್ಕ ಪಕ್ಕದವರು ಸೇರಿಹೊಂಡಿಕೊಂಡು ಕಳ್ಳರನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಗ್ರಾಮಸ್ಥರು ನಂದಗಡ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರು. ನಂದಗಡ ಪೆÇೀಲಿಸರು ಈ ಕುರಿತಂತೆ ವಿಚಾರಣೆ ನಡೆಸಿದ್ದಾರೆ.