ಎಲ್ಲಾ ಸಮಾಜದ ಸಾಧು, ಸಂತರು, ಸನ್ಯಾಸಿ ಹಾಗೂ ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ದವಾಗಿದ್ದು, ಸಮಾಜದಲ್ಲಿ ಘಾತಕ ಶಕ್ತಿಗಳ ಮಟ್ಟಾಹಾಕಲು ಬಿಜೆಪಿ ಸಿದ್ದ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಬೆಳಗಾವಿ ನಗರದ ಖಾಸಗಿ ಹೋಟೆಲ್ ದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ನಾಡಿನಲ್ಲಿ ಸಾಧು ಸಂತರ ಹಾಗೂ ಸನ್ಯಾಸಿಗಳ ತ್ಯಾಗದಿಂದ ಇಂದು ಪ್ರತಿಯೊಂದು ಸಮಾಜದ ಜನರು ಅವರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ ಸಾಮರಸ್ಯದ ಜೀವನ ನಡೆಸುವಾಗ ಕೆಲ ಪಟ್ಟಬದ್ದ ಹಿತಾಸಕ್ತಿಯ ಜನರ ಆಧಾರ ರಹಿತ ಟೀಕೆ ಟಿಪ್ಪಣೆಗಳಿಂದ ಧಾರ್ಮಿಕ ಗುರು ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ.
ಭಾರತ ಪ್ರಪಂಚಕ್ಕೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ವಿಚಾರ ನೀಡಿದ ಹಾಗೂ ನೀಡುತ್ತಿರುವ ದೇಶವಾಗಿದೆ. ಈ ದೇಶದಲ್ಲಿರುವ ಋಷಿ ಮುನಿಗಳು, ಸನ್ಯಾಸಿಗಳು ಇರುವಷ್ಟು ಯಾವ ದೇಶದಲ್ಲಿಯು ಇಲ್ಲ. ಇವರಿಗೆ ನೀಡುವ ಪೂಜ್ಯನೀಯ ಸ್ಥಾನ ದೇಶದಲ್ಲಿ ಬೇರೆ ಯಾರಿಗೂ ಸಿಗದು. ಆದರೆ ಕೆಲ ಒಂದು ಷಡ್ಯಂತ್ರಗಳ ಮೂಲಕ ಇಂದು ರಾಜ್ಯದಲ್ಲಿ ಕೆಲ ಮಠಾದೀಶರ ಬಗ್ಗೆ ಇಲ್ಲ ಸಲ್ಲದ ನಿರಾರ್ಥಕ ಅರೋಪಗಳನ್ನು ಮಾಡುತ್ತಾ ಪರಸ್ಪರ ಮಾತನಾಡಿದ ಸತ್ಯಕ್ಕ ಮತ್ತು ರುದ್ರಮ್ಮ ಹಾಸೀನಾಳ ಮಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ನಾಡಿನ ಅನೇಕ ಮಠಾಧೀಶರಿಗೆ ಮುಜುಗರ ಉಂಟು ಮಾಡುವುದರೊಂದಿಗೆ ಅವರ ಚಾರಿತ್ಯ ಹಾಳುಮಾಡುವ ಉದ್ದೇಶ ಹೊಂದಿದ್ದರಿಂದ, ಕಾಯಕ ತತ್ವದಡಿ ನಿಷ್ಠುರತೆ ಹೊಂದಿದ್ದ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಡಿವಾಳೇಶ್ವರ ಮಠದ ಪೂಜ್ಯ ಬಸವ ಸಿದ್ದಲಿಂಗ ಮಹಾಸ್ವಾಮಿಗಳು ಸುಳ್ಳು ಆಪಾದನೆಯ ಆಡಿಯೋ ಕಿವಿಗೆ ಬಿದ್ದ ತಕ್ಷಣ ಮಾನಸಿಕವಾಗಿ ನೊಂದಿದ್ದ
ಅವರನ್ನು, ಕೆಲ ಕುಹಕಿಗಳು ಇದನ್ನೆ ದೊಡ್ಡದಾಗಿ ಮಾಡಿದ್ದರಿಂದ ಈ ನಾಡಿನ ಒಬ್ಬ ಗಟ್ಟಿತನದ ಮಠಾಧೀಶರನ್ನ ಕಳೆದುಕೊಂಡಿರುವದು ಈ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇಂತಹ ಸೂಕ್ಷ್ಮ ಮನಸ್ಸಿನ ಸ್ವಾಮೀಜಿಗಳ ಮೇಲೆ ಹಾಗೂ ಎಲ್ಲ ಸಮಾಜಗಳ ಮಠಾಧೀಶರ ಮೇಲೆ ಲೈಂಗಿಕ ಅಸ್ತ್ರವನ್ನಿಟ್ಟುಕೊಂಡು ವ್ಯವಸ್ಥಿತ ಸಂಚು ರೂಪಿಸಿರುವ ವ್ಯಕ್ತಿಗಳನ್ನು ಹೆಡಮುರಿ ಕಟ್ಟಿ ಬಂಧಿಸಿಬೇಕು ಎಂಬುದೆ ಬಿಜೆಪಿ ಪಕ್ಷದ ನಿಲುವಾಗಿದೆ. ಈ ಬಗ್ಗೆ ಸರ್ಕಾರಕ್ಕು ಮತ್ತು ಪೋಲಿಸ್ ಇಲಾಖೆಗೆ ಆಗ್ರಹಿಸಲಾಗುವದು.