ಬೆಳಗಾವಿ: ಕಳೆದ 1 ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿ ಕುಳಿತುಕೊಂಡಿರುವ ಚಾಣಾಕ್ಷ ಚಿರತೆ ಇನ್ನೂ ಸೆರೆಯಾಗಿಲ್ಲ. ಆದರೆ ಕುಂದಾ ನಗರಿ ಜನರು ಮಾತ್ರ ಗಣೇಶನ ಜೊತೆಗೆ ಚಿರತೆಗೂ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಹೌದು, ಇಲ್ಲಿನ ವಿಶ್ವೇಶ್ವರಯ್ಯ ನಗರದ ಮನೆಯೊಂದರಲ್ಲಿ ಗಣೇಶನ ಮೂರ್ತಿ ಜೊತೆಗೆ ಚಿರತೆಯ ಗೊಂಬೆಯನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.
ಕಳೆದೊಂದು ತಿಂಗಳ ಹಿಂದೆ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನ ಸೇರಿದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. 4-5 ಬಾರಿ ಚಿರತೆ ಜನರ ಕಣ್ಮುಂದೆ ಬಂದರೂ ಮಿಂಚಿನಂತೆ ಮರೆಯಾಗುತ್ತಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಜನರು ಚಿರತೆ ಕುರಿತಾಗಿ ಬಗೆಬಗೆಯ ಟ್ರೋಲ್‌ಗಳನ್ನು ಮಾಡಿ ವೈರಲ್ ಮಾಡುತ್ತಿದ್ದಾರೆ.
Laxmi News 24×7