Breaking News

ಚಿಕ್ಕೋಡಿಯಲ್ಲಿ ಆಸ್ತಿ ವಿಚಾರವಾಗಿ ಶಿಕ್ಷಕರ ನಡುವೆ ಜಗಳ: ಸಾಕ್ಷಿಗಾಗಿ ಮಕ್ಕಳನ್ನು ಠಾಣೆಗೆ ಕರೆತಂದ ಶಿಕ್ಷಕಿ

Spread the love

ಬೆಳಗಾವಿ: ಮಕ್ಕಳು ದೇವರ ಸಮಾನ. ಮಕ್ಕಳು ಯಾವತ್ತು ಸುಳ್ಳನ್ನ ಹೇಳುವುದಿಲ್ಲ. ಹಾಗಂತ ತಮ್ಮ ನಡುವಿನ ಜಗಳಕ್ಕೆ ಸಾಕ್ಷಿಯಾಗಿ ಹೇಳಲು ಶಾಲಾ ಶಿಕ್ಷಕಿಯೊಬ್ಬರು ಶಾಲಾ ಅವಧಿಯಲ್ಲಿಯೇ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದಿರುವ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಶಿಕ್ಷಕ ಆರ್. ಎನ್ ಮಡಿವಾಳರು ಹಾಗೂ ಶಿಕ್ಷಕಿ ಎಂ.ಕೆ ಜಂಬಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ.

ಗಲಾಟೆ ಮಾಡಿಕೊಂಡ ಇಬ್ಬರು ಶಿಕ್ಷಕರು ಪರಸ್ಪರ ದೂರದ ಸಂಬಂಧಿಕರಾಗಿದ್ದಾರೆ. ಶಿಕ್ಷಕಿ ಎಂ. ಕೆ ಜಂಬಗಿ ಅವರ ಅಕ್ಕನ ಗಂಡನಾಗಿರುವ ಶಿಕ್ಷಕ ಆರ್. ಎನ್ ಮಡಿವಾಳರ ನಡುವೆ ಆಗಾಗ್ಗೆ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅವಾಂತರ ಮಾಡಿಕೊಂಡಿದ್ದರು. ಇಬ್ಬರು ಶಿಕ್ಷಕರು ಹೊಡೆದಾಡಿಕೊಂಡಿರುವುದನ್ನ ಶಾಲಾ ಮಕ್ಕಳು ನೋಡಿದ್ದರು. ಅದಕ್ಕಾಗಿ ಶಿಕ್ಷಕಿ ಸಾಕ್ಷಿ ಹೇಳಲು ವಿದ್ಯಾರ್ಥಿಗಳನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಶಿಕ್ಷಕರ ವಿರುದ್ದದ ಕ್ರಮಕ್ಕೆ ಆಗ್ರಹ: ಇನ್ನೂ ಈ ಇಬ್ಬರು ಶಿಕ್ಷಕರು ಕಳೆದ 2007 ರಿಂದ ರಾಮನಗರ ಬಡಾವಣೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರು ಹತ್ತಿರದ ಸಂಬಂಧಿಕರು ಆಗಿರುವುದರಿಂದ ತರಗತಿಯಲ್ಲಿ ಆಗಾಗ್ಗೆ ಜಗಳ – ಮನಸ್ತಾಪಗಳು ಸಾಮಾನ್ಯವಾಗಿಬಿಟ್ಟಿದೆಯಂತೆ. ಇವರಿಬ್ಬರ ಜಗಳದಿಂದಾಗಿ ಮಕ್ಕಳ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ ಉಂಟಾಗಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಪೋಷಕರ ವಾದವಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳ ದುರ್ನಡತೆ ಶಿಕ್ಷಕರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತು ಆಡಳಿತ ಉಪ ನಿರ್ದೇಶಕ ಎಂ ಎಲ್ ಹಂಚಾಟೆ ಪ್ರತಿಕ್ರಿಯೆ ನೀಡಿದ್ದು, ಇಬ್ಬರು ಶಿಕ್ಷಕರಿಗೆ ಈಗಾಗಲೇ ನೋಟಿಸ್​ ನೀಡಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ