Breaking News

ಹಣಕ್ಕಾಗಿ ಸರ್ಕಾರಿ ನೌಕರಳ ಅಪಹರಣ: ನಾಲ್ವರ ಬಂಧನ

Spread the love

ವಿಜಯಪುರ: ಹಣದ ಆಸೆಗಾಗಿ ಸರ್ಕಾರಿ ಉದ್ಯೋಗಿನಿಯನ್ನು ಅಪಹರಣ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು.

ಇಂಡಿ ಪಟ್ಟಣದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ವಿಜಯಪುರ ನಗರ ನಿವಾಸಿ ಲಕ್ಷ್ಮೀ ಜಗದೀಶ ಸೊನ್ನದ ಎಂಬ ನೌಕರಳು ಅಪಹರಣಕ್ಕೊಳಗಾದವರು.

ಆ.22 ರಂದು ಕೆಲಸ ಮುಗಿಸಿ ವಿಜಯಪುರ ನಗರಕ್ಕೆ ಬಂದಿಳಿದ ಲಕ್ಷ್ಮೀ ಕನಕದಾಸ ವೃತ್ತದಲ್ಲಿ ನಿಂತಿದ್ದಾಗ ಮನೆಗೆ ಹೋಗಲು ಆಟೋ ಹತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಆಟೋ ಹತ್ತಿದ ನಾಲ್ವರು ಸದರಿ ಮಹಿಳೆಯನ್ನು ಅಪಹರಣ ಮಾಡಿದ್ದರು. ನಗರದ ಸಿಂದಗಿ ಬೈಪಾಸ್ ಬಳಿ ಆಟೋ ಇಳಿಸಿ ಕಾರಿನಲ್ಲಿ ಬಲವಂತದಿಂದ ಕರೆದೊಯ್ದಿದ್ದರು.

ಆ.23 ರ ವರೆಗೂ ಅಪಹಣರಕಾರರು ಲಕ್ಷ್ಮಿಯನ್ನು ತಮ್ಮ ವಶದಲ್ಲೇ ಇರಿಸಿಕೊಂಡು, 5 ಲಕ್ಷ ರೂ. ತಂದುಕೊಡುವಂತೆ ಬೇಡಿಕೆ ಇರಿಸಿದ್ದರು. ಅಂತಿಮವಾಗಿ ಮಹಿಳೆಯನ್ನು ಇಂಡಿ ಪಟ್ಟಣದ ಸೇವಾಲಾಲ್ ವೃತ್ತದಲ್ಲಿ ಇಳಿಸಿ ಪರಾರಿಯಾಗಿದ್ದರು. ಅಪಹೃತರಿಂದ ಬಿಡುಗಡೆ ಬಳಿಕ ಲಕ್ಷ್ಮೀ ವಿಜಯಪುರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಿಳಾ ಠಾಣೆ ಸಿಪಿಐ ಜಾನರ್ ಅವರ ಸಾರಥ್ಯದಲ್ಲಿ ತನಿಖೆಗೆ ಇಳಿದಾಗ ಸಿಂದಗಿ ಬೂಪಾಸ್ ಬಳಿ ನಾಲ್ವರು ಆರಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ