ಸರಕಾರಿ ಶಾಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಪ್ರತಿಭಟನೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದಲ್ಲಿ ನಡೆದಿದೆ.
ಯಲಗೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಶಾಲಾ ಆವರಣದಲ್ಲಿನ ಮರದ ಕೆಳಗೆ ಕುಳಿತು ಮಕ್ಕಳು ಪಾಠ ಕಲಿಯುತ್ತಿದ್ದಾರೆ.
ಪ್ರತಿವರ್ಷ ಗಣೇ ಮೂರ್ತಿ ತಂದು ಪ್ರತಿಷ್ಠಾಪಿಸ ಲಾಗುತ್ತಿತ್ತು ಈ ಬಾರಿ ಮುಖ್ಯ ಗುರುಗಳಿಂದ ಆಚರಣೆ ಆಗಿಲ್ಲ.
ಶಾಲೆಯ ಮುಖ್ಯಗುರು ಎಫ್ ಆರ್ ದರ್ಗಾ ಅವರಿಂದ ಆಚರಣೆ ಆಗಿಲ್ಲ, ಹೀಗಾಗಿ ಮಕ್ಕಳು, ಪಾಲಕರು ಪ್ರತಿಭಟನೆ ನಡೆಸಿದರು.
Laxmi News 24×7