ಇಂದು ಸನ್ಮಾನ್ಯ ಕಾರ್ಯಸಾಮ್ರಾಜ್ಞಿ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ರವರು ಖಾನಾಪೂರ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಡಾ ಅಂಜಲಿತಾಯಿ ಫೌಂಡೇಶನ್ ವತಿಯಿಂದ ಉಚಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಯ ಮಾಡಿದರು..
ತಾಲೂಕಿನ _ಮುಗಳಿಹಾಳ್_ ಗ್ರಾಮದ ಪ್ರೌಢಶಾಲೆ ಹಾಗೂ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ್ಯ ಶಾಸಕರು ಸ್ವತಃ ಹೋಗಿ ಭವಿಷ್ಯದ ಭಾರತದ ಬೆಳಕು ಮುದ್ದು ವಿದ್ಯಾರ್ಥಿಗಳಿಗೆ ಡಾ ಅಂಜಲಿತಾಯಿ ಫೌಂಡೇಶನ್ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್ ವಿತರಣೆಯ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ವಿದ್ಯೆ ಎಂಬುದು ಒಂದೇ ವಸ್ತು ಈ ಜಗತ್ತಿನಲ್ಲಿ ಕದಿಯಲಾಗದ ವಸ್ತು, ಜೀವನ ಪೂರ್ತಿ ಜೊತೆಯಾಗಿದ್ದು ಮಣ್ಣಿನಲ್ಲಿ ಮಣ್ಣಾಗಿ ಹೋಗುವ ತನಕ ಜೋತೆಯಾಗಿ ಇರುವುದು ವಿದ್ಯೆ ಆದ್ದರಿಂದ ವಿದ್ಯಾವಂತರಾಗಿ ಹಾಗೂ ನಿಮ್ಮ ತಂದೆ ತಾಯಿಗಳಿಗೆ, ಊರಿಗೆ, ರಾಜ್ಯದ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಡಾ.ಅಂಜಲಿತಾಯಿ ಫೌಂಡೇಶನ್ ಸದಾ ವಿದ್ಯಾರ್ಥಿಗಳೊಂದಿಗೆ.🤝