Breaking News

ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

Spread the love

ವದೆಹಲಿ: ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಆರೋಪಿ ತಪ್ಪಿಸಿಕೊಂಡಿದ್ದರೂ, ವಿದ್ಯುನ್ಮಾನ ಸಾಧನಗಳನ್ನು ಬಳಸಿ, ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ ಮತ್ತು ವಿಡಿಯೋ ಮಾರ್ಗವಾಗಿಯೂ ಪಡೆದುಕೊಳ್ಳಬಹುದು.

 

ಈ ವೇಳೆ ಆರೋಪಿ ಪರ ವಕೀಲರು ಹಾಜರಿದ್ದರೆ ಸಾಕು. ಹಾಗೆಯೇ ಆರೋಪಿಯ ಗೈರಿನಲ್ಲೇ ವಿಚಾರಣೆ ನಡೆಸಿ, ಶಿಕ್ಷೆಯನ್ನೂ ಪ್ರಕಟಿಸಬಹುದು. ಈ ಕುರಿತ ಕರ್ನಾಟಕದ ತಿದ್ದುಪಡಿ ಮಸೂದೆ “ದ ಕೋಡ್‌ ಆಫ್ ಕ್ರಿಮಿನಲ್‌ ಪ್ರೊಸೀಜರ್‌-2021’ಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು.

ಇಲ್ಲಿಯವರೆಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವ ಹೊತ್ತಿನಲ್ಲಿ ಮಾತ್ರ, ಸಾಕ್ಷಿಗಳ ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬಹುದಾಗಿತ್ತು. ಇದೂ ಕೂಡ ಆರೋಪಿ ಬಂಧನಕ್ಕೊಳಗಾಗಿದ್ದರೆ ಮಾತ್ರ ಸಾಧ್ಯವಿತ್ತು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ