Breaking News

ಮಗನ ಶಿವಗಣಾರಾಧನೆ ವೇಳೆ ಹೃದಯಘಾತದಿಂದ ತಾಯಿ ಸಾವು: 9 ದಿನ ಅಂತರದಲ್ಲಿ ಎರಡು ಸಾವು ಕಂಡ ಮನೆ

Spread the love

ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತವಾಗಿದ್ದು, 9 ದಿನಗಳ ಅಂತರದಲ್ಲಿ ತಾಯಿ ಮಗ ಸಾವಿನಲ್ಲಿ ಒಂದಾದ ಮನಕಲಕುವ ಘಟನೆ ನಡೆದಿದೆ.

ಕುಷ್ಟಗಿ ಪಟ್ಟಣದ 14ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ರವಿಕುಮಾರ ದುರಗಪ್ಪ ಕೆಂಗಾರಿ ಲೋ ಬಿಪಿಯಿಂದ ಕಳೆದ ಆ.9ರಂದು ಅಕಾಲಿಕವಾಗಿ ನಿಧನರಾಗಿದ್ದರು.

ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮ ಕ್ಕಾಗಿ ಬಂಧು ಬಾಂಧವರನ್ನು ಅಹ್ವಾನಿಸಿದ್ದರು.

ದಿವಂಗತ ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ದತೆಯ ಸಂಧರ್ಭದಲ್ಲಿ ಮಗನ ಅಗಲಿಕೆಯ ಕೊರಗಿನಲ್ಲಿದ್ದ ತಾಯಿಗೆ ಹೃದಯಘಾತವಾಗಿ ಕೊನೆಯುಸಿರೆಳದೆರು. ಕೆಂಗಾರಿ ಮನೆಯಲ್ಲಿ 9 ದಿನಗಳಲ್ಲಿ ಮಗ, ತಾಯಿಯ ಸಾವು ಸಂಭವಿಸಿದೆ.

ಈ ದುರ್ಘಟನೆಯಿಂದ ಇನ್ನೋರ್ವ ಹಿರಿಯ ಪುತ್ರ ಗಜೇಂದ್ರಗಡ ತಹಶೀಲ್ದಾರ ಆಗಿರುವ ರಜನೀಕಾಂತ ಕೆಂಗಾರಿಗೆ ಬಿಪಿ ಏರಿಳಿತವಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ ಅವರ ಸಹೋದರ ನಾಗರಾಜ ಕೆಂಗಾರಿ ಸಹ ಆಸ್ಪತ್ರೆಗೆ ದಾಖಲಾಗಿದ್ದು, ಸಕಾಲಿಕ ಚಿಕಿತ್ಸೆ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ