ಸಾಲಭಾದೆ ತಾಳಲಾರದೆ ಯುವಕ ನದಿಗೆ ಹಾರಿ ಆತ್ಮಹತ್ಯೆ

Spread the love

ಸಾಲಭಾದೆ ತಾಳಲಾರದೆ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಯಡೂರಟೇಕ ಗ್ರಾಮದಲ್ಲಿ ನಡೆದಿದೆ.

ಕೃಷ್ಣಾ ದುಂಡಪ್ಪಾ ಪಾಟೀಲ (30) ಆತ್ಮಹತ್ಯೆಯನ್ನು ಮಾಡಿಕೊಂಡ ಯುವಕ.ಕುಟುಂಬ ನಿರ್ವಹಣೆಗಾಗಿ ಸಾಲವನ್ನು ಮಾಡಿಕೊಂಡಿದ್ದನು

.ಸಾಲವನ್ನು ತೀರಿಸಲಾಗದೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.ಹಳೇ ಯಡೂರ ಗ್ರಾಮದ ಎಸ್.ಸಿ‌ ಕಾಲೋನಿಯ ‌ನದಿತೀರದಲ್ಲಿ ಶವಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ‌ರೂಪಾಲಿ‌ ಗೂಡೋಡಗಿ ಹೆಡ್ ಕಾನಸ್ಟೇಬಲ್ ಸೂರ್ಯಕಾಂತ ನಾಯಿಕ,ಎ.ಎಸ್ ಸಪ್ತಸಾಗರ ಭೇಟಿಯನ್ನು ನೀಡಿ ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಸಂಬಂದಿಕರಿಗೆ ಹಸ್ತಾಂತರಿಸಲಾಯಿತು


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ