Breaking News

ಪ್ರಭಾವಿ ಭ್ರಷ್ಟರಿಗೆ ಲೋಕಾ ನಡುಕ ಶುರು; ಭ್ರಷ್ಟಾಚಾರ ಆರೋಪದಲ್ಲಿ ಕೇಸ್​ ದಾಖಲಿಸಲು ಸ್ವತಂತ್ರ

Spread the love

ಬೆಂಗಳೂರು : ಹೈಕೋರ್ಟ್​ ಆದೇಶದ ಅನ್ವಯ ಲೋಕಾಯುಕ್ತ ಬಲಪಡಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನಿರೀೆಯಂತೆ ಲೋಕಾಯುಕ್ತ ಬಲಗೊಂಡರೆ ಪ್ರಭಾವಿ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಸಿಬಿಯಲ್ಲಿ ದಾಖಲಾಗಿರುವ 1803 ಪ್ರಕರಣಗಳೂ ಲೋಕಾಯುಕ್ತ ವ್ಯಾಪ್ತಿಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಎಸಿಬಿ ದಾಳಿಗಷ್ಟೇ ಸೀಮಿತವಾಗಿ ನಿರಾಳರಾಗಿದ್ದ ಆರೋಪಿಗಳಿಗೂ ಈಗ ಕಾನೂನಿನ ಬಿಸಿ ತಟ್ಟಲಿದೆ.

 

ಲೋಕಾಯುಕ್ತ ಪೊಲೀಸ್​ ವಿಭಾಗದಲ್ಲಿ ಅಂದಾಜು 350 ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಪ್ರಕರಣಗಳನ್ನು ಇತ್ಯರ್ಥಪಡಿಸಿದರೆ ಲೋಕಾಯುಕ್ತದಲ್ಲಿರುವ ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ಎಸಿಬಿ ಸೇರಿ ಬೇರೆ ಇಲಾಖೆಗೆ ವರ್ಗಾವಣೆ ಮಾಡಿ ಈ ವಿಭಾಗವನ್ನೇ ಮುಚ್ಚಲು ಚಿಂತನೆ ನಡೆಸಿತ್ತು. ಆದರೀಗ ಎಸಿಬಿಯನ್ನೇ ಹೈಕೋರ್ಟ್​ ರದ್ದುಪಡಿಸಿರುವುದರಿಂದ ಲೋಕಾಯುಕ್ತ ಪೊಲೀಸ್​ ವಿಭಾಗಕ್ಕೆ ಮತ್ತೆ ಹಳೇ ಖದರ್​ ಬಂದಿದೆ.

ಎಸಿಬಿ ಸಂಸ್ಥೆ ಆರಂಭವಾದ ಬಳಿಕ ಲೋಕಾಯುಕ್ತ ಪೊಲೀಸರಿಗೆ ದಾಳಿ ನಡೆಸಲು ಅವಕಾಶಗಳಿರಲಿಲ್ಲ. ಅಲ್ಲದೆ, ದೂರು ದಾಖಲಿಸಿಕೊಳ್ಳಲೂ ಅವಕಾಶಗಳಿಲ್ಲ. ಆದರೀಗ ಲೋಕಾಯುಕ್ತಕ್ಕೆ ಮೊದಲಿದ್ದ ಅಧಿಕಾರ ವಾಪಸ್ಸಾಗಲಿದೆ. ಲೋಕಾಯುಕ್ತ ರಚಿಸುವಾಗ ತನಿಖೆ ನಡೆಸುವುದು ಹಾಗೂ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವ ಅಧಿಕಾರವನ್ನು ಕೊಡಲಾಗಿತ್ತು. ಅದರಂತೆ ಭ್ರಷ್ಟಾಚಾರ ಆರೋಪ ಬರುವ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಮತ್ತು ಸಿಎಂ ಹೀಗೆ ಎಷ್ಟೇ ಪ್ರಭಾವಿಯಾದರೂ ಅವರ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಲಿದೆ. ಲೋಕಾಯುಕ್ತ ಪೊಲೀಸರು ಲೋಕಾಯುಕ್ತರ ನಿಯಂತ್ರಣದಲ್ಲಿ ಕೆಲಸ ಮಾಡಲಿದ್ದು, ಸ್ವತಂತ್ರವಾಗಿ ಕ್ರಿಮಿನಲ್​ ಕೇಸ್​ ಹಾಕುವ ಅಧಿಕಾರ ಇರಲಿದೆ.

ಲೋಕಾಯುಕ್ತ ಕಾಯ್ದೆ ಸೆಕ್ಷನ್​ 15ರ ಪ್ರಕಾರ ಅವರಿಗೆ ನಿರ್ಭೀತಿಯಿಂದ ಕೆಲಸ ಮಾಡಲು ಅಧಿಕಾರ ಇದೆ. ಲೋಕಾಯುಕ್ತ ವೃಂದ ಮತ್ತು ನೇಮಕ ನಿಯಮದಲ್ಲಿ ಪೊಲೀಸ್​ ಅಧಿಕಾರಿಗಳು ನೇಮಕಾತಿ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಸದ್ಯ ಲೋಕಾಯುಕ್ತದಲ್ಲಿ ಬೆರಳೆಣಿಕೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಎಸಿಬಿಯೂ ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವುದರಿಂದ ಎಸಿಬಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ಲೋಕಾಯುಕ್ತಕ್ಕೆ ವರ್ಗಾವಣೆಗೊಳ್ಳಲಿದ್ದಾರೆ. ಶಿೆ ರೂಪದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲು ಲೋಕಾಯುಕ್ತಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಅಲ್ಲಿರುವವರೆಲ್ಲ ಅಸಮಾಧಾನ ಹೊಂದಿರುವವರು ಎನ್ನಲಾಗುತ್ತಿದೆ. ಹೀಗಾಗಿ ಸರ್ಕಾರ ಪೂರ್ಣಪ್ರಮಾಣದಲ್ಲಿ ಪರಿಷ್ಕರಿಸಿ ಹೊಸ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ನಿಯೋಜಿಸಲಿದೆ.

ಬಚಾವಾಗಿದ್ದವರಿಗೆ ಸಂಕಷ್ಟ
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಲ್ಲಿ ಸಾವಿರಾರು ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಎಸಿಬಿ ತಂಡ ದಾಳಿ ನಡೆಸಿದೆ. ಆದರೆ, ಎಸಿಬಿ ಕೆಲಸ ದಾಳಿಗಷ್ಟೇ ಸೀಮಿತವಾಗಿದೆ. ಹೀಗಾಗಿ ದಾಳಿಗೆ ಒಳಗಾದರೂ ಭ್ರಷ್ಟ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜಾರೋಷವಾಗಿ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈಗ ಲೋಕಾಯುಕ್ತ ಚಾರ್ಜ್​ ತೆಗೆದುಕೊಂಡರೆ ದಾಳಿಗೆ ಒಳಗಾಗಿ, ಆರೋಪ ಸಾಬೀತುಪಡಿಸುವ ಸಾಮರ್ಥ್ಯವಿದ್ದರೂ ನಿರಾಳಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಲೋಕಾಯುಕ್ತ ಸಂಕಷ್ಟ ಎದುರುಗುವುದು ನಿಶ್ಚಿತ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ