ಹನೂರು: ಇಂದು ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿ ಸಾಕಷ್ಟು ಟೀಕೆಗೆ ಗುರಿಯಾದ ಕುರಿತು ಅರಣ್ಯ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹನೂರು ತಾಲೂಕಿನ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಉಮೇಶ್ ಕತ್ತಿ ತಾನು ಹಾಕಿರುವುದು ಬಟ್ಟೆ ಶೂ ಆಗಿದ್ದು, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ, ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ ಬಳಿಕ ಆನೆಗಳಿಗೆ ಸ್ವಾಗತ ಕೋರುವಾಗ ಹಾಕಿಕೊಂಡಿದ್ದೆ,
ನನಗೂ 61 ವರ್ಷ ವಯಸ್ಸಾಗಿದ್ದು ಬುದ್ಧಿ ಇದೆ, ಅದನ್ನು ದೊಡ್ಡದು ಮಾಡಿ ವಿವಾದ ಮಾಡುವ ಅಗತ್ಯವಿಲ್ಲ, ಬೇಕಾದರೇ ನಾನು ಹಾಕಿಕೊಳ್ಳುವ ಶೂನ್ನು ಪರಿಶೀಲಿಸಬಹುದು, ಬಟ್ಟೆಯಿಂದ ಮಾಡಿರುವುದು ಎಂದು ಸಮಜಾಯಿಷಿ ಕೊಟ್ಟರು.
Laxmi News 24×7