Breaking News

ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ಬಂದನ

Spread the love

ಬಾಗಲಕೋಟೆ: ಗರ್ಭ ಧರಿಸಿದ್ದ ಎಮ್ಮೆಗೆ ನಕಲಿ ವೈದ್ಯನೊಬ್ಬ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಎಮ್ಮೆ ಮತ್ತು ಕರು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ನಕಲಿ ವೈದ್ಯನ ಹೆಸರು ಶಿವಾನಂದ ಮಲ್ಲಪ್ಪ ರುದ್ರಪ್ಪನವರ.

ಈತ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಲಿ ಗ್ರಾಮದವ. ಮುಧೋಳ ತಾಲೂಕಿನ ಕನಸಗೇರಿ ಗ್ರಾಮದ ಹನುಮಂತ ಬಾಳಪ್ಪ ಪೂಜೇರಿ ಅವರಿಗೆ ಸೇರಿದ ಎಮ್ಮೆ ಗರ್ಭ ಧರಿಸಿ ಹಲವು ತಿಂಗಳಾಗಿತ್ತು. ಅನಾರೋಗ್ಯ ಕಾರಣ ಮಾಲೀಕರು ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ. ತಾನು ಪಶು ವೈದ್ಯ ಎಂದು ಹೇಳಿಕೊಂಡು ಬಂದ ಶಿವಾನಂದ ರುದ್ರಪ್ಪನವರ ಅವೈಜ್ಞಾನಿಕ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ.

ಇದರಿಂದ ತೀವ್ರ ರಕ್ತ ಸ್ರಾವವಾಗಿ ಎಮ್ಮೆ ಹಾಗೂ ಕರು ಮೃತಪಟ್ಟಿವೆ. ಜು.26ರಂದು ಘಟನೆ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಧೋಳ ಪಶು ಇಲಾಖೆ ವೈದ್ಯಾಧಿಕಾರಿಗಳು ಲೋಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ಬಿಜೆಪಿಗೆ ಆನೆಬಲ, ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆ

Spread the loveಬಾಗಲಕೋಟೆ: ಉಪಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ ಹೆಚ್ಚುತ್ತಿದ್ದು ರಾಜಕೀಯ ಚಟುವಟಿಕೆಗಳು ಬರದಿಂದ ಸಾಗಿವೆ. ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯವನ್ನು‌ಮೆಚ್ವಿಕೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ