Breaking News

ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

Spread the love

ಮೈಸೂರು: ಆರು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕಿ ನಿಗೂಢ ಸಾವಿನ ಪ್ರಕರಣವನ್ನು ನಂಜನಗೂಡು ಪೊಲೀಸರು ಕೊನೆಗೂ ಭೇದಿಸಿದ್ದು, ನಗರಸಭಾ ಸದಸ್ಯೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ನಂಜನಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತರು.

ಕಳೆದ ಮಾರ್ಚ್ 9 ರಂದು ಶಿಕ್ಷಕಿ ಸುಲೋಚನಾ ಅನುಮಾನಸ್ಪಾದವಾಗಿ ಮನೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ನಿಗೂಢ ಸಾವಿನ ಪ್ರಕರಣ ಬೆನ್ನತ್ತಿದ್ದ ನಂಜನಗೂಡು ಪೊಲೀಸರಿಗೆ ಒಂದು ಮಹತ್ವದ ಸುಳಿವು ದೊರೆಯಿತು.

ಯಾವುದು ಆ ಸುಳಿವು ಅಂದರೆ, ಶಿಕ್ಷಕಿ ಸುಲೋಚನಾ ಹಾಗೂ ಗಾಯತ್ರಿ ಪತಿ ಮುರುಗೇಶ್ ನಡುವೆ ಅಕ್ರಮ ಸಂಬಂಧ ಇದ್ದಿದ್ದು. ಮರುಗೇಶ್​ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಡಿ ಗ್ರೂಪ್ ನೌಕರನಾಗಿದ್ದಾರೆ. ಅಕ್ರಮ ಸಂಬಂಧ ವಿಚಾರವಾಗಿ ಗಾಯತ್ರಿ ಮತ್ತು ಮುರುಗೇಶ್​ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಎಷ್ಟೇ ಗಲಾಟೆ ಮಾಡಿ, ಬುದ್ಧಿಮಾತು ಹೇಳಿದರು ಮುರುಗೇಶ್​ ಮಾತ್ರ ಸುಲೋಚನಾ ಸಹವಾಸವನ್ನು ಬಿಟ್ಟಿರಲಿಲ್ಲ.

ಕೊನೆಗೆ ಶಿಕ್ಷಕಿ ಸುಲೋಚನಾ ಕೊಲೆಗೆ ಸಂಚು ರೂಪಿಸಿದ ಗಾಯತ್ರಿ ತನ್ನ ಸಂಬಂಧಿಕರ ಸಹಾಯದೊಂದಿಗೆ ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ. ಘಟನೆ ನಡೆದು ಆರು ತಿಂಗಳ ಬಳಿಕ‌ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್​ ಸಾಧನಾ ಸಮಾವೇಶ: ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದ ಸಿಎಂ

Spread the loveಮೈಸೂರು: ಶನಿವಾರ ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಭರ್ಜರಿ ತಯಾರಿಯೊಂದಿಗೆ ಸಿದ್ಧಗೊಂಡಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ