ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 777 ಚಾರ್ಲಿ (777 Charlie) ಯಾವ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿತ್ತು ಎಂದರೆ ಎಲ್ಲರ ಸ್ಟೇಟಸ್ಗಳಲ್ಲಿ ಕೂಡ ಚಾರ್ಲಿಯದೇ ಹವಾ ಎಂದರೂ ತಪ್ಪಾಗಲಾರದು. ಚಿತ್ರ ಬಿಡುಗಡೆ ಆಗಿ 50 ದಿನಗಳನ್ನೂ ಪೂರೈಸಿದೆ. ಜೊತೆಗೆ ಓಟಿಟಿ ಅಲ್ಲಿಯೂ ಚಿತ್ರವು ಬಿಡುಗಡೆ ಆಗಿದ್ದು, ಒಟ್ಟಾರೆಯಾಗಿ ಚಿತ್ರವು ಬರೋಬ್ಬರಿ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಭಾಗವಾಗಿ ಚಿತ್ರತಂಡ ಇದೀಗ ವಿದೇಶಕ್ಕೆ ಹಾರಿದೆ.
ಹೌದು, ಚಿತ್ರವು ಸೂಪರ್ ಹಿಟ್ ಆಗಿದ್ದಲ್ಲದೇ, ಬಾಕ್ಸ್ ಆಫೀಸ್ನಲ್ಲಿಯೂ ಉತ್ತಮ ಗಳಿಕೆ ಮಾಡಿತು. ಹೀಗಾಗಿ ಚಾರ್ಲಿ ಸಿನಿಮಾದ ಚಿತ್ರತಂಡ ಇದೀಗ ಚಿತ್ರದ ಸಕ್ಸಸ್ ಅನ್ನು ಸಂಭ್ರಮಿಸಲು ಥೈಲ್ಯಾಂಡ್ಗೆ ಹಾರಿದೆ.