Breaking News

ಸಿದ್ದರಾಮಯ್ಯ ಅಮೃತ ಮಹೋತ್ಸವ: ಬೆಳಗಾವಿಯಲ್ಲಿ 3 ಕಿಮೀ ಉದ್ದದ ಫೋಟೋ ಬಯೋಗ್ರಫಿ ಸಿದ್ಧ..!

Spread the love

ಬೆಳಗಾವಿ : ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಸಿದ್ದರಾಮಯ್ಯರ ಜೀವನದ ವಿವಿಧ 500 ಫೋಟೋಗಳನ್ನು ಬಳಸಿ 3000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ ಸಿದ್ಧಪಡಿಸಲಾಗಿದೆ.

ಜಿಲ್ಲೆಯ ಸವದತ್ತಿ ಪಟ್ಟಣದ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ ಆನಂದ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯ ರಾಜಕೀಯ ಜೀವನದ ಫೋಟೋಗಳನ್ನು ಬಳಸಿ ಬಯೋಗ್ರಫಿ ತಯಾರಿಸಿದೆ. ಇದಕ್ಕೆ ಸುಮಾರು 500 ಫೋಟೋಗಳನ್ನು ಬಳಸಿಕೊಳ್ಳಲಾಗಿದ್ದು, 3 ಸಾವಿರ ಮೀಟರ್ ಉದ್ದದ ಬಟ್ಟೆಯನ್ನು ಬಳಸಿಕೊಳ್ಳಲಾಗಿದೆ.

ಸವದತ್ತಿಯ ಕಾಂಗ್ರೆಸ್ ಪಕ್ಷದ ಮುಖಂಡ‌ರಾಗಿದ್ದ ದಿ.ಆನಂದ ಚೋಪ್ರಾ ಅವರ ಪುತ್ರ ಸೌರಭ್ ಆನಂದ ಛೋಪ್ರಾ ಅವರು ಸಿದ್ದರಾಮಯ್ಯ ನಡೆದು ಬಂದ ಹಾದಿ ಮತ್ತು ಅವರ ಜೀವನ ಚರಿತ್ರೆ ಬಿಂಬಿಸಲು ಈ ವಿಶಿಷ್ಟ ಪ್ರಯತ್ನವನ್ನು ಮಾಡಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ