ಬೆಂಗಳೂರು, ಜು.6- ನಿಮ್ಮ ನಿಮ್ಮ ವಾರ್ಡ್‍ಗಳಿಗೆ 20 ಲಕ್ಷ ರೂ. ನೀಡಿದ್ದೇವೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ. ಪಕ್ಷಾತೀತವಾಗಿ ನೀವೇ ವಾರಿಯರ್ಸ್‍ಗಳಂತೆ ಕೆಲಸ ಮಾಡಬೇಕು ಎಂದು ಪಾಲಿಕೆ ಸದಸ್ಯರಿಗೆ ಸಚಿವ ಆರ್.ಅಶೋಕ್ ಸಲಹೆ ನೀಡಿದರು.
ಕೊರೊನಾ ಸಂಬಂಧ ಪಾಲಿಕೆ ಸಭೆಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವಾರ್ಡ್‍ಗೂ ತಾರತಮ್ಯ ಮಾಡುವುದಿಲ್ಲ. ಎಲ್ಲ ಪಕ್ಷವೂ ಒಂದೇ. ನಿಮಗೆ ನೀಡಿರುವ ಹಣವನ್ನು ರೋಗಿಗಳಿಗೆ ಬಳಸಿ ಎಂದರು.
ಕೊರೊನಾದಿಂದಾಗಿ ಹೆಚ್ಚಿನ ಸಮಸ್ಯೆಗಳು ಉಂಟಾಗಿವೆ. ಕೊರೊನಾ ಸಂಬಂಧ ಜನ ಆತಂಕಕ್ಕೆ ಈಡಾಗಿದ್ದಾರೆ. ಅತಿಯಾದ ಪ್ರಚಾರವೂ ಭಯ-ಭೀತಿಗೊಳಿಸಿದೆಯೇನೋ. ಚುನಾಯಿತ ಪ್ರತಿನಿಧಿಗಳಾಗಿ ಮನೆಯಲ್ಲಿ ಕೂರುವಂತಿಲ್ಲ. ಬೀದಿಯಲ್ಲಿ ಸರದಿ ಸಾಲಿನಲ್ಲಿ ನಿಂತು ವೋಟ್ ಹಾಕಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಜನರ ಬಳಿ ಬಂದು ಅವರ ಸಮಸ್ಯೆ ಆಲಿಸಬೇಕು. ಅನೇಕ ಮಾಧ್ಯಮಗಳು ರೋಗಿಗಳಿಗೆ ಸರಿಯಾದ ಊಟ ಇಲ್ಲ ರೋಗಿಗಳಿಗೆ ಎಂದು ಹೇಳಿವೆ. ಹೀಗಾಗಿಯೇ ನಾನೇ ಖುದ್ದು ಅಲ್ಲಿಗೆ ಹೋಗಿ ಪರಿಶೀಲಿಸಿದ್ದೇನೆ. ತಾಜ್ ವೆಸ್ಟೆಂಡ್‍ನಿಂದ ಊಟ ಬರುತ್ತಿದೆ. ಸಮಸ್ಯೆ 5 ಪರ್ಸೆಂಟ್ ಇದೆ. ಅದನ್ನು ಸರಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇಂತಹ ಕ್ಲಿಷ್ಟ ಸಮಯದಲ್ಲಿ ಅಧಿಕಾರಿಗಳು, ವೈದ್ಯರನ್ನು ತೆಗಳಲು ಸಾಧ್ಯವಿಲ್ಲ. ಅವರ ಕಷ್ಟ ಕೂಡ ಅರ್ಥ ಮಾಡಿಕೊಳ್ಳಬೇಕು. ಈ ಸಭೆಯ ಉದ್ದೇಶ ಇಷ್ಟೆ ಸದಸ್ಯರ ಸಲಹೆ ಮುಖ್ಯ ಎಂದರು.
ಕೊರೊನಾ ಸಂಬಂಧ ಪಾಲಿಕೆಯಲ್ಲಿ ಇಂದು ವಿಶೇಷ ಸಭೆ ಬಡೆದಿದ್ದು, ಮೂರು ದಿನಗಳ ಕಾಲ ಸಭೆ ಮುಂದುವರಿಯಲಿದೆ. ಇಂದು 70 ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಆರು ತಿಂಗಳು ಪಕ್ಷಾತೀತವಾಗಿ ಕೊರೊನಾ ವಾರಿಯರ್ಸ್‍ಗಳ ರೀತಿ ಕೆಲಸ ಮಾಡೋಣ ಎಂದು ಅಶೋಕ್ ಎಲ್ಲ ಸದಸ್ಯರಿಗೂ ಕರೆ ನೀಡಿದರು