ಪಂಚಮಸಾಲಿ ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ಕಳಿಸುತ್ತೇವೆ. ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ.
ಕೊಟ್ಟ ಮಾತನ್ನ ಬಸವರಾಜ ಬೊಮ್ಮಾಯಿ ತಪ್ಪಬಾರದು, ಮಾತು ತಪ್ಪಿದರೆ ನಮ್ಮ ಶಾಪ ನಿಮಗೆ ತಟ್ಟುತ್ತದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದಲ್ಲಿಂದು ಪಂಚಮಸಾಲಿ ಬೃಹತ್ ರ್ಯಾಲಿಗೂ ಮೊದಲು ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮಯ ದೊಡ್ಡದಿದೆ. ನಾವು ಬಹುಸಂಖ್ಯಾತರು, ಆದ್ರೆ ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ.
ಬೊಮ್ಮಾಯಿಯವರೇ ಇದೆ ಕೊನೆ ಹಂತ, ಆಗಷ್ಟ್ 22 ಒಳಗೆ ನಮಗೆ ಮೀಸಲಾತಿ ನೀಡಿ. ಕೊಟ್ಟ ಮಾತು ತಪ್ಪಿದ್ರೆ ನಿಮ್ಮ ಮನೆ ಮುಂದೆ ಹೋರಾಟ ಮಾಡುತ್ತೇವೆ
ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ಕಳಿಸುತ್ತೆವೆ.ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಕೊಟ್ಟ ಮಾತನ್ನ ಬಸವರಾಜ ಬೊಮ್ಮಾಯಿ ತಪ್ಪಬಾರದು, ಮಾತು ತಪ್ಪಿದೃ ನಮ್ಮ ಶಾಪ ನಿಮಗೆ ತಟ್ಟುತ್ತದೆ.