ಶನಿವಾರ (ಜುಲೈ 30) ಮುಂಜಾನೆ ಗುಡುಗು ಸಹಿತವಾಗಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ನಲುಗಿದೆ.
ಬೆಳಗ್ಗೆ ಬಿಡದೆ ಸುರಿದ ಬಿರುಸಿನ ಮಳೆಯ ಕಾರಣದಿಂದ ಪಂಪ್ ವೆಲ್ ಸೇತುವೆ ಕೆಳಗೆ ನಾಲ್ಕು ಭಾಗದಲ್ಲೂ ನೀರು ತುಂಬಿ ಕೆರೆಯಂತಾಗಿದೆ.
ವರುಣಾರ್ಭಟದಿಂದ ಜಲಾವೃತಗೊಂಡ ಪ್ರದೇಶಗಳ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.