Breaking News

ಇಷ್ಟು ದಿನ ಮದುವೆ ಅಂತಿದ್ರು ಈಗ ಅಣ್ಣ-ತಂಗಿಯಾಗಿಬಿಟ್ರಾ!

Spread the love

ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ವೈರಲ್ ಆಗುತ್ತಿರುವುದು ಗೊತ್ತೇ ಇದೆ.

ನರೇಶ್ ಪವಿತ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜನರಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮೇಲಾಗಿ ಈ ರೀತಿ ನಡೆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಆಗಿದ್ದು ಹಾಟ್ ಟಾಪಿಕ್ ಆಗಿದೆ.


ಸಿನಿನಗರದ ಟಾಕ್ ಪ್ರಕಾರ ವಿಜಯ್ ನಿರ್ಮಲಾ ಅವರ ಪುತ್ರ ಹಿರಿಯ ನಟ ನರೇಶ್ (ಹಿರಿಯ ನರೇಶ್) ಈಗಾಗಲೇ ಮೂರು ಮದುವೆಯಾಗಿದ್ದಾರೆ. ಆದರೆ ಅವರು ಆ ಮೂವರಿಂದ ವಿಚ್ಛೇದನ ಪಡೆದರು. ಇದೀಗ ಅವರ ನಾಲ್ಕನೇ ಮದುವೆಯ ಮಾತು ಹೊರಬಿದ್ದಿದ್ದು, ಟಾಲಿವುಡ್ ವಲಯದಲ್ಲಿ ದಿಢೀರ್ ಚರ್ಚೆ ಶುರುವಾಗಿದೆ.


ಇದೀಗ ಮತ್ತೊಮ್ಮ ನರೇಶ್​ ಹಾಗೂ ಪವಿತ್ರಾ ಲೋಕೇಶ್​ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ರಾಮ್​ರಾವ್​ ಆನ್​ ಡ್ಯೂಟಿ ಸಿನಿಮಾ. ಹೌದು, ಜುಲೈ 29ರಂದು ರವಿತೇಜ ಅಭಿನಯದ ಈ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನರೇಶ್​ – ಪವಿತ್ರಾ ಲೋಕೇಶ್​ ನಟಿಸಿದ್ದಾರೆ.


ರಾಮ್​ರಾವ್​ ಆನ್​ ಡ್ಯೂಟಿ ಸಿನಿಮಾದಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್ ಒಡಹುಟ್ಟಿದವರ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಎಂದು ತಮಾಷೆ ಮಾಡುತ್ತಿದ್ದಾರೆ.


ನಿಜ ಜೀವನದಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಷ್ಟೆಲ್ಲಾ ರಂಪಾಟ ಆಗಿದ್ದರು ತೆರೆ ಮೇಲೆ ಒಡ ಹುಟ್ಟಿದವರ ರೀತಿಯ ಪಾತ್ರ ಮಾಡಿರುವುದನ್ನು ನೋಡಿ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.


ನರೇಶ್​ ಹಾಗೂ ಪವಿತ್ರಾ ಲೋಕೇಶ್​ ಸಹೋದರ ಮತ್ತು ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್​ ರವಿತೇಜ ತಾಯಿಯಾಗಿ ನಟಿಸಿದ್ದಾರೆ. ನರೇಶ್​, ನಾಯಕಿ ದಿವ್ಯಾಂಶ ಕೌಶಿಕ್​ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ನರೇಶ್​, ರವಿತೇಜಾಗೆ ಸೋದರ ಮಾವನಾಗಬೇಕು.


ಯಾವಾಗ ಈ ಎರಡು ಪಾತ್ರಗಳು ತೆರೆ ಮೇಲೆ ಬರುತ್ತೋ ಆಗ ಪ್ರೇಕ್ಷಕರು ಕೂಗುತ್ತಾ ಮಜಾ ಮಾಡಿದ್ದಾರೆ.ಇಬ್ಬರ ನಡುವಿನ ಸಂಬಂಧ ಜಗಜ್ಜಾಹೀರಾಗಿರುವುದು ಪ್ರೇಕ್ಷಕರ ಮನದಲ್ಲಿ ಅಚ್ಚಾಗಿರುವುದರಿಂದ ಈ ಸಿನಿಮಾದಲ್ಲಿ ಇವರ ಪಾತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡಿಲ್ಲ.


ಪವಿತ್ರಾ ಲೋಕೇಶ್ ಕನ್ನಡದ ನಟಿಯಾದರೂ ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದಿದ್ದಾರೆ. ಇಲ್ಲೂ ಉತ್ತಮ ನಟಿಯಾಗಿ ಬೆಳೆದಿದ್ದಾರೆ . ಮೂಲಗಳ ಪ್ರಕಾರ ಆಕೆಗೆ ಈಗಾಗಲೇ ಎರಡು ಮದುವೆಯಾಗಿದೆ ನರೇಶ್​ಗೆ ಸಹ 3 ಮದುವೆಯಾಗಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ