ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆ ಹೈಕಮಾಂಡ್‌ಗೆ ತಲುಪಿದ ಬೆನ್ನಲ್ಲೇ ಈಗ ಮಾಜಿ ಸಚಿವ ಜಮೀರ್ ಅಹಮದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರಿಗೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಹುಟ್ಟುಹಬ್ಬ ವಿಚಾರದಲ್ಲಿ ನಾನು ರಾಜ್ಯವ್ಯಾಪಿ ಪ್ರವಾಸ ಮಾಡಿ ಮುಸ್ಲಿಮರನ್ನು ಕಾಂಗ್ರೆಸ್ ಪರವಾಗಿ ಒಟ್ಟು ಸೇರಿಸುತ್ತಿದ್ದೇನೆ. ವೈಯಕ್ತಿಕ ಅಭಿಪ್ರಾಯ ವಾಗಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಿ ಎಂದಿದ್ದನ್ನೇ ಮುಂದಿಟ್ಟು ನನ್ನನ್ನು ವಿಲನ್‌ನಂತೆ ಬಿಂಬಿಸಲಾಗಿದೆ. ಇದರಿಂದ ನನ್ನ ಸಮುದಾಯಕ್ಕೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದು ಸುರ್ಜೇವಾಲರಲ್ಲಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಅಮೆರಿಕದಲ್ಲಿರುವ ಸುರ್ಜೇವಾಲರಿಗೆ ಜಮೀರ್ ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದಾರೆ. ಒಕ್ಕಲಿಗ ರಿಗೂ ಮುಂದಿನ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಹೇಳಿ ವಿಷಯ ಪ್ರಾರಂಭಿಸಿದವರೇ ಶಿವಕುಮಾರ್. ನಾನು ನಮ್ಮ ಸಮುದಾಯದ ಜನಸಂಖ್ಯೆಯೂ ಇದೆ, ಮುಸ್ಲಿಮರು ಮುಖ್ಯಮಂತ್ರಿ ಸ್ಥಾನ ಕೇಳಬಹುದು. ಅದರಲ್ಲಿ ತಪ್ಪೇನು ಎಂದಿದ್ದೆ.