ಬೆಳಗಾವಿ: ಬೆಳಗಾವಿ ಸೇನಾ ನೇಮಕಾತಿ ವಿಭಾಗದಿಂದ ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ಡಿಸೆಂಬರ್ 5ರಿಂದ 22ರ ವರೆಗೆ ಬೀದರ್ನ ನೆಹರು ಕ್ರೀಡಾಂಗಣದಲ್ಲಿ ‘ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.
2022ರ ಡಿಸೆಂಬರ್ 5ರಿಂದ ಆರಂಭವಾಗಲಿರುವ ಅಗ್ನಿಪಥ್ ಸೇನಾ ನೇಮಕಾತಿಯಲ್ಲಿ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಆಸಕ್ತರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆ.3ರಿಂದ ಸೆ.3ರ ವರೆಗೆ ಆನ್‌ಲೈನ್ ರಿಜಿಸ್ಟ್ರೇಶನ್ ನಡೆಯಲಿದೆ.
ಅಗ್ನಿವೀರ್ ಟೆಕ್ನಕಲ್, 10ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸ್‌ಮನ್, 8ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸ್‌ಮನ್, ಅಗ್ನಿವೀರ್ ಕ್ಲರ್ಕ್, ಅಗ್ನಿವೀರ್ ಸ್ಟೋರ್ ಕೀಪರ್ಸ್, ಅಗ್ನಿವೀರ್ ಟೆಕ್ನಿಕಲ್ ಕೆಟಗರಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
Laxmi News 24×7