ಕಲಬುರಗಿ: ಬಾವಿಯೊಂದರಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಶ್ರೀಶೈಲ್ ಲಕ್ಷ್ಮಣ (13) ಹಾಗೂ ಲಕ್ಷ್ಮಣ ಗುಂಡಪ್ಪ(12) ಈಜಲು ಹೋಗಿ ಸಾವನ್ನಪ್ಪಿದ ದುರ್ದೈವಿಗಳು. ಈ ಇಬ್ಬರು ಮಕ್ಕಳು ಹೇಬಳಿ ರೋಡ್ ನ್ಯೂ ಬಾಳೇನಕೇರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಇಬ್ಬರು ಈಜಲು ಎಂದು ಬಾವಿಗೆ ತೆರಳಿದ್ದಾರೆ. ಈಜು ಸರಿಯಾಗಿ ಬಾರದಿದ್ದರೂ ಬಾವಿಗೆ ಇಳಿದು ದುಸ್ಸಾಹಸ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳು ಸಾವನ್ನು ಕಂಡು ಸ್ಥಳೀಯರು ಸಹ ಕಣ್ಣೀರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7