ಕಾರ್ಗಿಲ್ ಯುದ್ಧ ಎನ್ನುತ್ತಲೇ ಎಂಥವರ ಮನದಲ್ಲೂ ರೋಮಾಂಚನ ಮೂಡುತ್ತದೆ. ಎದುರಾಳಿಗಳೊಂದಿಗೆ ನಮ್ಮ ಸೈನಿಕರು ಧೈರ್ಯದಿಂದ ಸೆಣಸುವ, ಎದುರಾಳಿಗಳನ್ನು ಸದೆಬಡಿಯುವ ದೃಶ್ಯಗಳು ಕಣ್ಣೆದುರು ಬಂದುನಿಲ್ಲುತ್ತದೆ.
ತಮ್ಮ ಕುಟುಂಬದ ಹಿತ ಬದಿಗೊತ್ತಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣವನ್ನೇ ತೆತ್ತ ಸೈನಿಕರು ನಮ್ಮ ನಾಡಿನಲ್ಲಿದ್ದಾರೆ.
ಅಂತಹವರಲ್ಲಿ ಬೆಳಗಾವಿಯ ಕುಟುಂಬವೂ ಒಂದಿದೆ.ಸುಮಾರು ಮೂರು ತಲೆಮಾರಿನವರೆಗೆ ದೇಶ ಸೇವೆ ಮಾಡುತ್ತಿದೆ. ಇತ್ತ ಕಾಗ್ರಿಲ್ ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಹೇಳೊದಾದರೂ ಏನು
ಭಾರತೀಯ ಸೇನೆಯಲ್ಲಿ ಸುಧೀರ್ಘವಾಗಿ ಬೆಳಗಾವಿ ಅದೊಂದು ಕುಟುಂಬ ಮೂರು ತಲೆಮಾರಿನಿಂದ ಸೇವೆ ಸಲ್ಲಿಸುತ್ತಿದೆ.ಅದರಲ್ಲಿ ಓರ್ವ ಮಗ ಕಾಗ್ರಿಲ್ ಯುದ್ಧದಲ್ಲಿ ಸಾವನ್ನಪ್ಪಿದರೆ ಮತ್ತೊಬ್ಬ ಅನ್ಯಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರೂ ಮಕ್ಕಳನ್ನು ಕಳೆದುಕೊಂಡ ದುಃಖವಿದ್ದರೂ, ದೇಶಕ್ಕಾಗಿ ಇಬ್ಬರೂ ಮಕ್ಕಳು ಸಲ್ಲಿಸಿದ ಸೇವೆ ನೆನೆದು ದಂಪತಿ ಹೆಮ್ಮೆಪಡುತ್ತಿದ್ದಾರೆ. ಅವರೇ ಬಬನ್ ಮಸ್ಕೆ. ಇವರು ಬೆಳಗಾವಿಯ ಶಾಹೂ ನಗರದಲ್ಲಿ ಇಬ್ಬರು ಮೊಮ್ಮಕ್ಕಳು, ಸೊಸೆ, ಹೆಂಡತಿಯೊಂದಿಗೆ ವಾಸವಾಗಿದ್ದಾರೆ. ಇವರ ಮಗ ಭಾರತ್ ಮಸ್ಕೆ ಭಾರತೀಯ ಸೇನೆಯಲ್ಲಿ ಹತ್ತು ವರ್ಷಗಳ ಸೇವೆ ಸಲ್ಲಿಸಿ ಕೊನೆಗೆ ಕಾಗ್ರಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನ ಅರ್ಪಣೆ ಮಾಡಿಕೊಂಡಿದ್ದಾರೆ.
ಭಾರತ್ ಮಸ್ಕೆ ತಂದೆ ಬಬನ್ ಮಸ್ಕೆ ಕೂಡ ಮಾಜಿ ಸೈನಿಕರು. ಭಾರತಾಂಬೆ ಮೇಲಿನ ಪ್ರೀತಿಗಾಗಿ ತಮ್ಮ ಮಗನಿಗೂ ಭಾರತ್ ಎಂಬ ಹೆಸರಿಟ್ಟ ಅವರು, 1989ರಲ್ಲಿ ಸೇನೆ ಸೇರಲು ಪ್ರೇರಣೆ ತುಂಬಿದರು. 10ವರ್ಷ ದೇಶದ ಗಡಿ ಕಾಯ್ದ ಭಾರತ್ 1999ರಲ್ಲಿ ಜಮ್ಮುವಿನಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಅಮರರಾಗಿದ್ದಾರೆ.ಭಾರತ್ ಮಸ್ಕೆ ಕುಟುಂಬದಲ್ಲಿ ಮೂರು ತಲೆಮಾರು ದೇಶ ಸೇವೆ ಮಾಡಿದೆ. ಭಾರತ್, ಪ್ರವೀಣ ಮಸ್ಕೆ ತಂದೆ ಬಬನ್ ಮಸ್ಕೆ ಮತ್ತು ಅವರ ತಂದೆ ನಾರಾಯಣ ಮಸ್ಕೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಮೂರು ತಲೆಮಾರಿನಿಂದ ಈ ಕುಟುಂಬ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದಾರೆ.