Breaking News

ನೂರಾರು ಮಂದಿ ದೇವಿಯ ಮಂದಿರದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷವೂ ಆμÁಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲ ಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಎಸೆದು, ಹಾರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಚಿಕ್ಕ ಮಕ್ಕಳು ಕೂಡ ಸಣ್ಣ ಕೋಳಿ ಮರಿಗಳನ್ನು ಹಾರಿಸಿದ್ದು ವಿಶೇಷವಾಗಿತ್ತು. ಹರಕೆ ಈಡೇರಿದ ಖುಷಿಯಲ್ಲಿ ಈ ಆಚರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ಭಕ್ತರು ಕುರಿ ಬಲಿ ನೀಡುವುದಾಗಿಯೂ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯವಾಗಿದೆ.ಇನ್ನು ಬೆಳಿಗ್ಗೆ 10 ಗಂಟೆಗೆ ಮಂಗಾಯಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 12 ಗಂಟೆಗೆ ದೇವಿಗೆ ಎರಡನೇ ಆರತಿ ಬೆಳಗಿದರು. ಕ್ಷಣ ಕ್ಷಣಕ್ಕೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಮಾತನಾಡಿದ ಭಕ್ತರು ನಾವು ಬಹಳ ವರ್ಷದಿಂದ ಜಾತ್ರೆ ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ. ಈ ಬಾರಿ ಬಾಳ ಜೋರ ಜಾತ್ರೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Spread the love

ಬೆಳಗಾವಿಯ ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಅದ್ಧೂರಿಯಾಗಿ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ.ಹೌದು ವಡಗಾವಿಯ ಮಂಗಾಯಿದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಸೊಗಡಿನ ಈ ಜಾತ್ರೆ ಸಾವಿರಾರು ಭಕ್ತರು ತನ್ನ ಆಕರ್ಷಿಸುತ್ತದೆ. ವಡಗಾವಿಯ ಮಂಗಾಯಿ ದೇವಸ್ಥಾನ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿ ಹೋಗಿತ್ತು. ಸ್ಥಳೀಯರು, ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.

ನೂರಾರು ಮಂದಿ ದೇವಿಯ ಮಂದಿರದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷವೂ ಆμÁಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲ ಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಎಸೆದು, ಹಾರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಚಿಕ್ಕ ಮಕ್ಕಳು ಕೂಡ ಸಣ್ಣ ಕೋಳಿ ಮರಿಗಳನ್ನು ಹಾರಿಸಿದ್ದು ವಿಶೇಷವಾಗಿತ್ತು. ಹರಕೆ ಈಡೇರಿದ ಖುಷಿಯಲ್ಲಿ ಈ ಆಚರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ಭಕ್ತರು ಕುರಿ ಬಲಿ ನೀಡುವುದಾಗಿಯೂ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯವಾಗಿದೆ.

ಇನ್ನು ಬೆಳಿಗ್ಗೆ 10 ಗಂಟೆಗೆ ಮಂಗಾಯಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 12 ಗಂಟೆಗೆ ದೇವಿಗೆ ಎರಡನೇ ಆರತಿ ಬೆಳಗಿದರು. ಕ್ಷಣ ಕ್ಷಣಕ್ಕೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಮಾತನಾಡಿದ ಭಕ್ತರು ನಾವು ಬಹಳ ವರ್ಷದಿಂದ ಜಾತ್ರೆ ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ. ಈ ಬಾರಿ ಬಾಳ ಜೋರ ಜಾತ್ರೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ