Breaking News

ಹಿರೇಬಾಗೇವಾಡಿ ಆರೋಗ್ಯ ಇಲಾಖೆ ವಸತಿ ಗೃಹಗಳು, ಆತಂಕದ ನಡುವೆ ವಾಸ

Spread the love

ಹಿರೇಬಾಗೇವಾಡಿ: ಜನರ ಆರೋಗ್ಯ ರಕ್ಷಣೆಗೆ ದಿನರಾತ್ರಿ ಶ್ರಮಿಸುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

 

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಗೆ 45 ಗ್ರಾಮಗಳು ಇದ್ದು, ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಮಾರು 12 ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಾಗಿ 14 ವಸತಿಗೃಹಗಳು ಇದ್ದು, ಅದರಲ್ಲಿ 11 ವಸತಿ ಗೃಹಗಳು ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 3 ಮಾತ್ರ ಉಪಯೋಗವಾಗುತ್ತಿವೆ. ಆದರೆ ಅವು ಸಹ ಶಿಥಿಲಗೊಂಡಿದ್ದು, ಅನಿವಾರ್ಯವಾಗಿ ಕೆಲವು ಸಿಬ್ಬಂದಿ ಈ ಕಟ್ಟಡಗಳಲ್ಲಿ ಆತಂಕದ ನಡುವೆ ವಾಸ ಮಾಡುತ್ತಿದ್ದಾರೆ.

ಈ ಕೇಂದ್ರಕ್ಕೆ ಮಂಜೂರಾದ ಹುದ್ದೆಗಳು 44. ಅಷ್ಟು ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲವಾದರೂ ಸದ್ಯ ಇರುವ ಸಿಬ್ಬಂದಿಗೂ ವಸತಿ ಗೃಹಗಳು ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ಸಿಬ್ಬಂದಿ ಬಾಡಿಗೆ ಮನೆ ಮಾಡುವಂತಾಗಿದೆ. ಆಸ್ಪತ್ರೆಯ ಆವರಣದಲ್ಲಿಯೇ ಇರುವ ವಸತಿ ಗೃಹಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರೆ ರೋಗಿಗಳಿಗೂ ಅನುಕೂಲ ಎನ್ನುವುದು ಜನರ ಅಭಿಪ್ರಾಯ.

ಮಳೆಗಾಲ ಬಂತೆಂದರೆ ಸಾಕು, ಇಲ್ಲಿನ ವಸತಿ ಗೃಹದಲ್ಲಿ ಇರುವವರ ಬದುಕು ಮೂರಾಬಟ್ಟೆ ಎಂದೇ ಅರ್ಥ. ಬಿರುಕು ಬಿಟ್ಟಿರುವ ಮೇಲ್ಚಾವಣಿಯಿಂದ ನಿರಂತರವಾಗಿ ಸೋರುವ ನೀರು, ವಸತಿ ಗೃಹದ ಸುತ್ತಮುತ್ತಲು ಕೆಸರಿನ ಹೊಂಡವೇ ಸೃಷ್ಟಿಯಾಗಿರುತ್ತದೆ. ಹಳೆಯ ವಿದ್ಯುತ್‌ ಜೋಡಣೆಯಿಂದಾಗಿ ಶಾಕ್‌ ತಗಲುವ ಭಯ ವಸತಿ ಗೃಹದಲ್ಲಿರುವ ಸಿಬ್ಬಂದಿ ಕುಟುಂಬಗಳಿಗೆ ಕಾಡುತ್ತದೆ.

ಆರೋಗ್ಯ ಇಲಾಖೆಯು ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಿತದೃಷ್ಟಿಯಿಂದ ಹಳೆಯ ಕಟ್ಟಡಗಳನ್ನು ಕೆಡವಿ ಜಿ+2 ಮಾದರಿಯ ಮನೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನರ ಅನಿಸಿಕೆ. ಜನರು ಆಡಳಿತಕ್ಕೆ ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ