ನವ್ಯಶ್ರೀ ರಾವ್ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬoಧಿಸಿದoತೆ ನವ್ಯಶ್ರೀ ರಾವ್ ವಿರುದ್ಧ ರಾಜ್‌ಕುಮಾರ್ ಟಾಕಳೆ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನವ್ಯಶ್ರೀ ರಾವ್ ಇಂದು ವಿಚಾರಣೆಗೆ ಎಪಿಎಂಸಿ ಠಾಣೆಗೆ ಹಾಜರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೈ ನಾಯಕಿ ನವ್ಯಶ್ರೀ ರಾವ್‌ರವರ ಅಶ್ಲೀಲ ವೀಡಿಯೋ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಇದ್ದ ಫೊಟೊ ವೈರಲ್ ಆಗಿದ್ದವು. ಈ ಕುರಿತಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ನವ್ಯಶ್ರೀ ವಿರುದ್ಧ ಜುಲೈ ೧೮ರಂದು ದೂರು ನೀಡಿದ್ರು. ಹಾಗಾಗಿ ಇಂದು ಸೋಮವಾರ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಗೆ ವಿಚಾರಣೆಗೆ ನವ್ಯಶ್ರೀ ರಾವ್ ಹಾಜರಾದರು. ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಆರೋಪದಡಿ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ದೂರು ನೀಡಿದ್ದರು. ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ದೂರು ನೀಡಿದ್ದ ಹಿನ್ನೆಲೆ ಇಂದು ನವ್ಯಶ್ರೀ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಭಜಂತ್ರಿ ಎದುರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ ೧೮೬೦(U/s ೩೮೪, ೪೪೮, ೫೦೪, ೫೦೬, ೩೪)ರಡಿ ಕೇಸ್ ದಾಖಲಾಗಿದೆ. ಇನ್ನು ಈ ಈ ಕುರಿತಂತೆ ಜುಲೈ ೨೩ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಪ್ರತಿದೂರು ದಾಖಲಿಸಿದ್ದರು.
ಇನ್ನು ವಿಚಾರಣೆಯ ವೇಳೆ ಕೆಲ ಮೆಡಿಕಲ್ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯನ್ನು ಮನಗಂಡ ಪೊಲೀಸ್ ಇಲಾಖೆ ನವ್ಯಶ್ರೀಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು.