Breaking News

ಆಲಮಟ್ಟಿ ಜಲಾಶಯದಲ್ಲಿ ಅವನಲ್ಲ, ಅವಳು. ಬುರ್ಖಾಧಾರಿಯ ಅಸಲಿಯತ್ತೇನು? ಪೊಲೀಸರು ಹೇಳಿದ್ದೇನು?

Spread the love

ವಿಜಯಪುರ: ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಬುರ್ಖಾಧಾರಿ ವ್ಯಕ್ತಿಯೊಬ್ಬ ಸಂಚರಿಸಿ ಭಾರಿ ಆತಂಕ ಸೃಷ್ಟಿಯಾಗಿತ್ತು.

ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದ ಈ ವ್ಯಕ್ತಿ ಬುರ್ಖಾ ಧರಿಸಿದ್ದ ಕಾರಣ ಮೊದಲು ಮಹಿಳೆ ಎಂದು ಅಂದುಕೊಳ್ಳಲಾಗಿತ್ತು.

ಕೆಲ ಸಮಯದ ಬಳಿಕ ಆ ಬುರ್ಖಾಧಾರಿ, ಪಕ್ಕದಲ್ಲಿರುವ ಮುಳ್ಳು ಕಂಟಿಗಳ ಕಡೆಗೆ ಹೋಗಿ ವಾಪಸ್​ ಬರುವಾಗ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ ಪೊಲೀಸರು ಬುರ್ಖಾ ಧರಿಸಿದ್ದು ಮಹಿಳೆ ಅಲ್ಲ. ಪುರುಷ ಎಂಬುದು ತಿಳಿಯಿತು. ಈ ನಡವಳಿಕೆ ಕುರಿತು ಸಾಕಷ್ಟು ಅನುಮಾನ ಹಾಗೂ ಆತಂಕ ಸೃಷ್ಟಿಯಾಗಿತ್ತು. ನಂತರ ವಿಚಾರಣೆ ಬಳಿಕ ಮಂಗಳಮುಖಿ ಎಂದು ತಿಳಿದುಬಂತು.

ವಿಚಾರಣೆ ವೇಳೆ ತನ್ನೂರು ಮಂಗಳೂರು ಎಂದಿದ್ದ ಈಕೆ, ಮತ್ತೊಮ್ಮೆ ಹಾಸನ ಜಿಲ್ಲೆ ಸಕಲೇಶಪುರ ಅಂತಲೂ ಹೇಳಿದ್ದಾಳೆ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದಳು. ಆದರೆ ಈಗ ಇನ್ನೂ ಹೊಸದೊಂದು ಕಥೆ ಹೇಳಿದ್ದು, ಈ ಕುರಿತು ಎಸ್.ಪಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.

ಈ ಮಂಗಳಮುಖಿಯ ಹೆಸರು ಕಿಶೋರ ಎಂದು ತಿಳಿದಿದೆ. ಬೆಂಗಳೂರಿನಲ್ಲಿ ಬೇಕರಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಆ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಹೀಗಾಗಿ ಯಾರೂ ಆಘಾತಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಎಸ್.ಪಿ ಆನಂದಕುಮಾರ ಹೇಳಿದರು.

ತನಗೆ ಹೆಣ್ಣುಮಕ್ಕಳಿಗೆ ಹಾಕುವ ವೇಷಭೂಷಣ ಹಾಕಿಕೊಂಡರೆ ಖುಷಿಯಾಗುತ್ತದೆ, ಅದಕ್ಕಾಗಿ ಬುರ್ಖಾ ಧರಿಸಿದೆ ಎಂದಿದ್ದಾರೆ. ಮನೆಯವರಿಂದ ಕದ್ದು ಮುಚ್ಚಿ ಹೀಗೆ ವೇಷ ಧರಿಸಿ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ‌. ಸದ್ಯಕ್ಕೆ ದೊರಕಿರುವ ಮಾಹಿತಿ ಪ್ರಕಾರ ಯಾವುದೇ ಅಂತಿಂಥ ವಿಷಯ ಇಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸದ್ಯ ಆಲಮಟ್ಟಿ ಜಲಾಶಯದ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಕಡೆಯಿಂದಲೂ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಲಾಶಯದ ಭದ್ರತೆಗೆ ಸರ್ವಸನ್ನದ್ದವಾಗಿದೆ ಎಂದರು.

ನಾಳೆ ಆಲಮಟ್ಟಿಯಲ್ಲಿಯೇ ಸಭೆ ಇದೆ. ಅಲ್ಲಿಯೇ ವಿವರಣೆ ಪಡೆಯಲಾಗುವುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು.


Spread the love

About Laxminews 24x7

Check Also

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಎಂಬಿಪಿ;

Spread the love ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಎಂಬಿಪಿ; ಮತ್ತೆ ಆಗಮಿಸಿದ ಮಳೆಯಿಂದ ಮತ್ತೆ ಶುರುವಾಯಿತು ಆತಂಕ ವಿಜಯಪುರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ