Breaking News
Home / Uncategorized / ಆಂಬುಲೆನ್ಸ್ ಚಾಲಕನ ವೇಗ, ಟೋಲ್ ಸಿಬ್ಬಂದಿಯ ಅಜಾಗರುಕತೆಗೆ ಬಿತ್ತು ಒಂದೇ ಕುಟುಂಬದ 4 ಹೆಣ

ಆಂಬುಲೆನ್ಸ್ ಚಾಲಕನ ವೇಗ, ಟೋಲ್ ಸಿಬ್ಬಂದಿಯ ಅಜಾಗರುಕತೆಗೆ ಬಿತ್ತು ಒಂದೇ ಕುಟುಂಬದ 4 ಹೆಣ

Spread the love

ಉಡುಪಿ, ಜುಲೈ 20: ಜಿಲ್ಲೆಗೆ ಬುಧವಾರ ಕರಾಳ ಬುಧವಾರವಾಗಿ ಮಾರ್ಪಾಟಾಗಿದೆ. ಬೆಳಗ್ಗಿನ ವೇಳೆಗೆ ಚಾಕಲೇಟ್ ನಿಂದ ಉಸಿರುಗಟ್ಟಿ ಮಗು ಸಾವನ್ನಪ್ಪಿದರೆ ಸಂಜೆಯ ವೇಳೆಗೆ ಆಂಬುಲೆನ್ಸ್ ಒಂದು ಭೀಕರವಾಗಿ ಅಫಘಾತವಾಗಿ ಒಂದೇ ಕುಟುಂಬದ ನಾಲ್ವರು ಮೃತರಾಗಿದ್ದಾರೆ. ಅಂಬುಲೆನ್ಸ್ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಎಂತವರ ಹೃದಯವೂ ನಡುಗಿಸುವಂತಿದೆ.

 

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ವೇಗವಾಗಿ ಬಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಭೀಕರ ಅಫಘಾತವಾಗಿದೆ. ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಆಂಬುಲೆನ್ಸ್ ಚಾಲಕ ಸಹಿತ ನಾಲ್ವರ ಸ್ಥಿತಿ ಗಂಭೀರವಾಗಿದೆ.

 

ಉಡುಪಿ: ಆಯಂಬುಲೆನ್ಸ್ ಭೀಕರ ಅಪಘಾತದಲ್ಲಿ 4 ದುರ್ಮರಣ; ರೋಗಿ, ರೋಗಿ ಪತ್ನಿ, ಓರ್ವ ಸಿಬ್ಬಂದಿ ಸಾವು, ವಿಡಿಯೋ!

ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಿವಾಸಿಗಳಾದ ಒಂದೇ ಕುಟುಂಬದ ಲೋಕೇಶ್ ಮಾಧವ ನಾಯ್ಕ, ಜ್ಯೋತಿ ಲೋಕೇಶ್ ನಾಯ್ಕ್, ಮಂಜುನಾಥ ಮಾಧವ ನಾಯ್ಕ, ಗಜಾನನ ಲಕ್ಷ್ಮಣ್ ನಾಯ್ಕ್ ಮೃತಪಟ್ಟವರು ಎಂದು ಗುರತಿಸಲಾಗಿದೆ. ಮೃತರ ಸಂಬಂಧಿಗಳಾದ ಗೀತಾ ಗಜಾನನ ನಾಯ್ಕ್, ಶಶಾಂಕ್ ಮತ್ತು ಟೋಲ್ ಗೇಟ್ ಸಿಬ್ಬಂದಿ ಶಂಬಾಜಿ ಪೋರ್ಪಡೆ ಸ್ಥಿತಿ ಗಂಭೀರವಾಗಿದೆ.

ಮೃತರ ಪೈಕಿ ಹೊನ್ನಾವರದ ಗಜಾನನ ಲಕ್ಷ್ಮಣ ನಾಯ್ಕ್ ಎಂಬುವವರಿಗೆ ರಕ್ತದೊತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಅಂಬುಲೆನ್ಸ್ ನಲ್ಲಿ ಹೊನ್ನಾವರದಿಂದ ಕುಂದಾಪುರಕ್ಕೆ ಸಾಗಿಸಲಾಗುತಿತ್ತು. ಉತ್ತರ ಕನ್ನಡ ಗಡಿದಾಟಿ ಆಂಬುಲೆನ್ಸ್ ಬೈಂದೂರಿನ ಶಿರೂರು ಟೋಲ್ ಬಳಿ ಬರುವಾಗ ಅಂಬುಲೆನ್ಸ್ ವೇ ನಲ್ಲಿ ಬ್ಯಾರಿಕೇಡ್ ತೆಗೆಯಲು ಹೋಗಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ ದನವೊಂದು ಮಲಗಿದ್ದ ಕಾರಣ ಟೋಲ್ ಸಿಬ್ಬಂದಿ ದನವನ್ನು ಓಡಿಸಲು ಮುಂದಾಗಿದ್ದಾರೆ.

ಆಂಬುಲೆನ್ಸ್ ಅನ್ನ ರೋಶನ್ ಎಂಬ ಚಾಲಕ ಓಡಿಸುತ್ತಿದ್ದು,ಅತೀ ವೇಗವಾಗಿ ಚಲಾಯಿಸುತ್ತಿದ್ದ . ಟೋಲ್ ಮುಂಭಾಗದಲ್ಲಿ ಟೋಲ್ ಸಿಬ್ಬಂದಿ ಮತ್ತು ದನಕ್ಕೆ ಡಿಕ್ಕಿ ಹೊಡೆಯೋದ‌ನ್ನು ತಪ್ಪಿಸಲು ಚಾಲಕ ರೋಶನ್ ಬ್ರೇಕ್ ಹೊಡೆದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿಯಾಗಿದೆ. ಆಂಬುಲೆನ್ಸ್ ಪಲ್ಟಿಯಾಗುತ್ತಿದ್ದಂತೆ ಆಂಬುಲೆನ್ಸ್ ಒಳಗಿದ್ದ ರೋಗಿ ಮತ್ತು ಸಂಬಂಧಿಕರು ಹೊರಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಿಂದ ರೋಗಿ ಗಜಾನನ ಲಕ್ಷ್ಮಣ ನಾಯ್ಕ್ ಮತ್ತು ಅವರ ಪತ್ನಿ ಜ್ಯೋತಿ ಮತ್ತು ಲೋಕೇಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿಗಿದ್ದಾರೆ. ಮಂಜುನಾಥ ಮಾಧವ ನಾಯ್ಕ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.

ಆಂಬುಲೆನ್ಸ್ ಚಾಲಕನ ಮಿತಿ ಮೀರಿದ ವೇಗ ಮತ್ತು ಅಂಬುಲೆನ್ಸ್ ವೇ ಗೆ ಬ್ಯಾರಿಕೇಡ್ ಹಾಕಿದ ಕಾರಣ, ಹಾಗೂ ವಾಹನಗಳು ಓಡಾಡುವ ಜಾಗದಲ್ಲಿ ಹಸುಗಳನ್ನು ಬಿಟ್ಟಿಕೊಂಡು ಅಜಾಗರೂಕತೆ ಮೆರದಿದ್ದ ಈ ಅವಘಡ ಸಂಭವಿಸಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

Spread the love ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ದಿನವನ್ನು ವಿರೋಧಿಸಿ, ಕಾಂಗ್ರೆಸ್ ಕ್ಷಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ