110 ವರ್ಷ ಸಾರ್ಥಕ ಜೀವನ ನಡೆಸಿ ಇಹಲೋಕ ತ್ಯಜಿಸಿದ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದ ಅಜ್ಜಿಯ ಅಂತ್ಯಕ್ರಿಯೆಯನ್ನು ಸುತ್ತ ನಾಲ್ಕೂರಿನ ಜನರು, ಬಂಧು-ಬಾಂಧವರು ಸೇರಿಕೊಂಡು ಅದ್ಧೂರಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಹೌದು 110 ವರ್ಷದ ಬಾಳವ್ವಾ ಅಜ್ಜಿ ಬುಧವಾರ ಸಾವಳಗಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಸಾವಳಗಿ ಸುತ್ತಲಿನ ನಾಲ್ಕೂರಿನ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಕೂಡ ಭಾಗವಹಿಸಿ ಅಜ್ಜಿಯ ಅಂತಿಮ ದರ್ಶನ ಪಡೆದುಕೊಂಡರು. ಸ್ವಗ್ರಾಮದಲ್ಲಿ ಅಜ್ಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಈ ಮಹಾತಾಯಿ ತಮ್ಮ ಐದು ಪೀಳಿಗೆಯ ಸಂತತಿ ಆರೋಗ್ಯಕರ ಜೀವನ ನಡೆಸುವುದನ್ನು ಕಣ್ಣಾರೆ ಕಂಡಿದ್ದರು. ಒಂದು ವರ್ಷಗಳ ಹಿಂದೆಯμÉ್ಟೀ ಅಜ್ಜಿಯ 109ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಸುತ್ತ ನಾಲ್ಕೂರಿನ ಜನರು ಸೇರಿಕೊಂಡು ವಿಜೃಂಭಣೆಯಿಂದ ಆಚರಿಸಿದ್ದರು. ಈ ಮಹಾ ತಾಯಿಗೆ ಒಟ್ಟು ಐದು ಜನರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು. ಐವತ್ತಕ್ಕೂ ಹೆಚ್ಚು ಮೊಮ್ಮಕ್ಕಳು ಮರಿ ಮಕ್ಕಳು, ಗಿರಿ ಮಕ್ಕಳನ್ನು ಈ ಅಜ್ಜಿ ಕಂಡಿದ್ದಾರೆ.