ಬೆಂಗಳೂರು: ಉಪಚುನಾವಣೆ ಸಂದರ್ಭದಲ್ಲಿ ಪರಸ್ಪರ ತೀವ್ರ ವಾಗ್ದಾಳಿ ನಡೆಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಮುನಿರತ್ನ ಸೋಮವಾರ ಮುಖಾಮುಖಿಯಾದರು.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇವರಿಬ್ಬರು ಮುಖಾಮುಖಿಯಾದರು.
ಮುನಿರತ್ನರನ್ನ ನೋಡುತ್ತಿದ್ದಂತೆ ‘ಓ ಏನ್ರೀ..’ ಎಂದು ಡಿ ಕೆ ಶಿವಕುಮಾರ್ ಬೆನ್ನು ತಟ್ಟಿದರು. ಆಗ ಡಿಕೆ ಶಿವಕುಮಾರ್ ಕೈ ಹಿಡಿಯಲು ಮುನಿರತ್ನ ಮುಂದಾದಾಗ ಶಿವಕುಮಾರ್ ನಿರಾಕರಿಸಿದರು.