ಖಾನಾಪುರ ತಾಲೂಕಿನ ಕಡತನ ಬಾಗೇವಾಡಿಯಿಂದ ಬೇಕವಾqಗೆÀ ಹೋಗುವ ರಸ್ತೆ ಮೇಲೆ ಪಕ್ಕದ ಗಿಡ ಮರಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಹೌದು ಜೂನ್ ತಿಂಗಳಿನಿಂದ ಅಗಸ್ಟ್ ತಿಂಗಳವರೆಗೆ ಅತಿ ಹೆಚ್ಚು ಮಳೆಗಾಲದ ದಿನಗಳು, ಈ ದಿನಗಳಲ್ಲಿ ರಸ್ತೆ ಪಕ್ಕದಲ್ಲಿರುವ ಮರಗಳು ರಸ್ತೆಯ ಮೇಲೆ ಬಿದ್ದು ಸಾರ್ವಜನಿಕರಿಗೆ ತೊಂದರೆಗಳಾಗುವುದು ಜಾಸ್ತಿ.
ಆದರೆ ಈ ರೀತಿ ಆಗಬಹುದಾದ ಅನಾಹುತಗಳ ಬಗ್ಗೆ ಮುಂಜಾಗ್ರತೆ ವಹಿಸಿಬೇಕಿದ್ದ ಸರಕಾರಿ ಇಲಾಖೆಗಳೇ ಈಗ ನಿರ್ಲಕ್ಷ ತೋರುತ್ತಿರುವುದು ಸಾರ್ವಜನಿಕರ ಬವೇಸರಕ್ಕೆ ಕಾರಣವಾಗಿದೆ. ಖಾನಾಪುರ ತಾಲೂಕಿನ ಅರಣ್ಯ ಇಲಾಖೆಯ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ತಮ್ಮ ಕೆಲಸವನ್ನು ಮಾಡುತ್ತಾ ಇರುವುದರಿಂದ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪರಡಾಡುವ ಪರಿಸ್ಥೀತಿ ನಿರ್ಮಾಣವಾಗಿದೆ