ಮದ್ಯವ್ಯಸನಿ ಯುವಕನೊಬ್ಬ ಜನ್ಮಕೊಟ್ಟ ತಾಯಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ ಎಸಗಿದ ಹೇಯ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.
ಶನಿವಾರ (ಜು.9) ಎಂದಿನಂತೆ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ರೋಕಿ ಜಾನ್ ಪುಡ್ತೋಳ ಬಂದಿದ್ದ. ಅಂದು ತಡರಾತ್ರಿ ನಿದ್ರೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿದ ಮಗ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ.
ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ ಬಂದು ಸುಮಾರು ಹೊತ್ತು ಒಬ್ಬರೇ ಕುಳಿತು, ನಂತರ ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದರು.
ಬೆಳಗ್ಗೆ 6ರ ಸುಮಾರಿಗೆ ಆರೋಪಿ ‘ತಾನು ಎಲ್ಲಿಯೋ ಹೋಗಬೇಕು’ ಎಂದು ಕೂಗಿ ಕರೆದು, ತಾಯಿಗೆ ಬೆದರಿಕೆ ಹಾಕುತ್ತಾ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ ಎಂದು ನಗರ ಪೊಲೀಸ್ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.