ಬೆಳಗಾವಿ: ಕಬ್ಬಿನ ಕದ್ದೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ತಂದೆ-ಮಗ ಇಬ್ಬರನ್ನೂ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದು, 204 ಕೆಜಿ ತೂಕದ ಹಸಿ ಗಾಂಜಾ ಬೆಳೆ ಜಪ್ತಿ ಮಾಡಿದ್ದಾರೆ.
ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಬಸಪ್ಪ ರಂಗಪ್ಪ ಲಗಳಿ(77) ಮತ್ತು ಇವರ ಪುತ್ರ ಸಿದ್ದಪ್ಪ ಬಸಪ್ಪ ಲಗಳಿ(40) ಬಂಧಿತರು.
ಹೊನಕುಪ್ಪಿ ಗ್ರಾಮದ ಹದ್ದಿನಲ್ಲಿನ ಸರ್ವೇ ನ.316/4ರ ತಮ್ಮ ಜಮೀನಿನಲ್ಲಿ ಯಾರಿಗೂ ಅನುಮಾನ ಬಾರದಂತೆ ಕಬ್ಬಿನಗದ್ದೆಯಲ್ಲಿ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಲಗೋಡ ಠಾಣೆ ಪಿಎಸ್‌ಐ ಜಿ.ಎಸ್.ಪಾಟೀಲ ನೇತೃತ್ವದ ತಂಡ 95.100 ಕೆಜಿ ಗಾಂಜಾ ಎಲೆ, 105 ಕೆಜಿ ತೂಕದಷ್ಟು ಕಾಂಡ ಮತ್ತು ಬೇರು ಒಳಗೊಂಡಂತೆ ಒಟ್ಟು 9.51 ಲಕ್ಷ ರೂ. ಬೆಲೆಬಾಳುವ ಹಸಿ ಗಾಂಜಾ ಬೆಳೆಯನ್ನ ಜಪ್ತಿ ಮಾಡಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಎಸ್‌ಐ ಡಿ.ವೈ.ಅಂಬಿ, ಎಸ್.ಪಿ.ಮುಗ್ಗಣ್ಣವರ, ಎಸ್.ವಿ.ಹಣಜಿ, ವಿ.ಎಲ್.ದೂಳಪ್ಪನ್ನವರ, ಎಂ.ಎಲ್.ಆಡಿನ, ಎಂ.ಆರ್.ಲದ್ದಿ, ಎಂ.ಎಸ್.ಕುರೆನ್ನವರ, ಎಸ್.ಎಲ್.ಮಂಗಿ ಹಾಗೂ ಕೆ.ಸಿ.ಬಾಗಿಲ ಇದ್ದರು
Laxmi News 24×7