ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ವರುಣರಾಯನ ಆರ್ಭಟ ಮುಂದುವರದಿದೆ…ಇದರಿಂದಾಗಿ ಚಿಕ್ಕೋಡಿ ತಾಲೂಕಿನ 4 ಸೇತುವೆಗಳು ಮುಳಗಡೆಯಾಗಿವೆ..
ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ..ಪರಿಣಾಮವಾಗಿ ಇತ್ತ ಚಿಕ್ಕೋಡಿ ತಾಲೂಕಿನ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಿಗೆ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ..ಅದಲ್ಲದೇ ಯಡೂರ-ಕಲ್ಲೋಳ,ಮಾಂಜರಿ-ಸೌಂದತ್ತಿ,ಮಲಿಕವಾಡ-ದತ್ತವಾಡ,ಯಕ್ಸಂಬಾ-ದಾನವಾಡ ಹೀಗೆ 4 ಕೆಳಹಂತದ ಸೇತುವೆಗಳು ಮುಳಗಡೆಯಾಗಿವೆ.
ಕೃಷ್ಣಾ,ವೇದಗಂಗಾ, ದೂಧಗಂಗಾ ನದಿಗಳಿಗೆ ಒಂದೇ ದಿನದಲ್ಲಿ 1 ಅಡಿಯಷ್ಟು ನೀರು ಏರಿಕೆಯಾಗಿದೆ.. ಪ್ರತಿ ವರ್ಷವೂ ಕೂಡಾ ಪ್ರವಾಹದಿಂದಾಗಿ ತತ್ತರಿಸಿಹೋಗಿರುವ ನದಿತೀರದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ..ಇನ್ನೂ ಕೃಷ್ಣಾ ನದಿ ನೀರು ಹೆಚ್ಚಳ ಹಿನ್ನೆಲೆಯಲ್ಲಿ ರೈತರು ತಮ್ಮ ಪಂಪ್ ಸೆಟ್ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹರಸಾಹಸವನ್ನು ಪಡುತ್ತಿದ್ದಾರೆ…