ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ನದಿತೀರದಲ್ಲಿ ಯುವಕರು ಮೀನು ಹಿಡಿಯಲು ದೌಡಾಯಿಸುತ್ತಿದ್ದಾರೆ.ಹೌದು ಯುವಕರು ಕೈಯಲ್ಲಿ ಗಾಳಗಳನ್ನು ಹಿಡಿದು ನದಿಯತ್ತ ಹೊರಡುವ ದೃಶ್ಯ ಸಾಮಾನ್ಯವಾಗಿದೆ.
ಚಿಕ್ಕೋಡಿ, ರಾಯಬಾಗ ತಾಲೂಕಿನ ನದಿತೀರದ ಗ್ರಾಮಗಳಾದ ಯಡ್ರಾವ ನಸಲಾಪುರ, ದಿಗ್ಗೇವಾಡಿ ಮೊದಲಾದ ಗ್ರಾಮಗಳ ಯುವಕರು ಸಹ ಗ್ರಾಮಕ್ಕೆ ಬಂದು ಮೀನು ಹಿಡಿಯುತ್ತಿದ್ದಾರೆ.
ಅರ್ಧ, ಒಂದು, ಎರಡು, ಮೂರು ಕಿಲೋವರೆಗಿನ ಮೀನುಗಳು ದೊರೆಯುತ್ತಿವೆ. ಈ ಕಾಯಕ ಕೆಲವರಿಗೆ ಹವ್ಯಾಸವಾದರೆ, ಕೆಲವರ ವೃತ್ತಿಯಾಗಿದೆ. ಇನ್ನೂ ಕೆಲವರು ಹೊಟ್ಟೆ ಪಾಡಿಗಾಗಿ ಈ ಕಾಯಕವನ್ನು ಮಾಡುತ್ತಿದ್ದಾರೆ.