Breaking News

ಔಟ್​..! ಹುಬ್ಬಳ್ಳಿ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ ಹಂತಕರು..!

Spread the love

ಹುಬ್ಬಳ್ಳಿ : ಚಂದ್ರಶೇಖರ್​​​ ಗುರೂಜಿ ಬೇನಾಮಿ ಆಸ್ತಿಗಳ ಸೀಕ್ರೆಟ್ ಔಟ್​ ಆಗಿದ್ದು, ಹುಬ್ಬಳ್ಳಿ ಪೊಲೀಸರ ಮುಂದೆ ಹಂತಕರು ಸ್ಫೋಟಕ ಹೇಳಿಕೆ ನೀಡಿದ್ಧಾರೆ.

 ಚಂದ್ರಶೇಖರ್​​​ ಗುರೂಜಿ ಮುಂಬೈ, ಹುಬ್ಬಳ್ಳಿ, ಬೆಂಗಳೂರು ಸೇರಿ ಹಲವೆಡೆ ಆಸ್ತಿ ಮಾಡಿದ್ದಾರೆ.

ಗುರೂಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ರು ಅಂತಾ ಶಿಷ್ಯ ಬಾಯಿಬಿಟ್ಟಿದ್ದಾನೆ. ಮಾಜಿ ನೌಕರ ಮಹಾಂತೇಶ್​ ಶಿರೂರಗೆ ಪೊಲೀಸ್ ಡ್ರಿಲ್​​​ ಮಾಡಿದ್ದು, ಕಳೆದ ರಾತ್ರಿ ಕಮಿಷನರ್ ಲಾಬೂರಾಮ್​​​ ವಿಚಾರಣೆ ನಡೆಸಿದ್ಧಾರೆ. 5 ಕೋಟಿ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಒಪ್ಪಿಗೆ ನೀಡಿದ್ಧಾರೆ. ಮಹಾಂತೇಶ್​ 5 ಕೋಟಿ ಮೌಲ್ಯದ ಆಸ್ತಿ ಮಾರಿದ್ಧಾರೆ. ಗುರೂಜಿಗೆ ಸೇರಿದ್ದ 5 ಕೋಟಿ ಮೌಲ್ಯದ ಆಸ್ತಿ ಮಾರಾಟವಾಗಿದೆ.

ಮಹಾಂತೇಶನ ಹೆಸರಲ್ಲಿ ಗೋಕುಲ ರಸ್ತೆ ಬಳಿ ಬೇನಾಮಿ ಆಸ್ತಿಯಿದೆ. ಮಾರಾಟ ಮಾಡಿದ್ದ ಹಣ ನೀಡುವಂತೆ ಗುರೂಜಿ ಒತ್ತಡ ಹಾಕಿದ್ದರೆ. ಇಬ್ಬರ ನಡುವೆ ಅನೇಕ ಸಲ ಇದೇ ಕಾರಣಕ್ಕೆ ಜಗಳ ನಡೆದಿತ್ತು. ಗುರೂಜಿ 2016ರಲ್ಲಿ ಮಹಾಂತೇಶ್​ನನ್ನು ಕೆಲಸದಿಂದ ತಗೆದಿದ್ದರು, ಮಹಾಂತೇಶ 2008ರಿಂದ ಮುಂಬೈನಲ್ಲಿ ಸರಳವಾಸ್ತು ಸಂಸ್ಥೆ ಮುಖ್ಯಸ್ಥ ಆಗಿದ್ದನು. ಮಹಾಂತೇಶ್ ದಂಪತಿ ಹೆಸರಲ್ಲಿ ಹುಬ್ಬಳ್ಳಿಯ ಕೆಲವೆಡೆ ಗುರೂಜಿ ಆಸ್ತಿ ಮಾಡಿದ್ದಾರೆ.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ